ಹೊನ್ನಾವರ (ಉತ್ತರ ಕನ್ನಡ): ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನ ಅಪರಿಚಿತನೋರ್ವ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಚಂದಾವರ ಹನುಮಂತ ದೇವಸ್ಥಾನದ ಬಳಿ ನಡೆದಿದೆ.
ಹೊನ್ನಾವರದ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಸರ ಕಳೆದುಕೊಂಡವರು. ಇವರು ಸಂಬಂಧಿಕರ ಮದುವೆಗೆಂದು ಚಂದಾವರಕ್ಕೆ ಬಂದಿದ್ದರು. ಮದುವೆ ಮುಗಿಸಿ ವಾಪಸ್ಸಾಗಲು ಟೆಂಪೋಗೆ ಕಾಯುತ್ತಿದ್ದ ವೇಳೆ ಯಾರೋ ಅಪರಿಚಿತನೋರ್ವ ನಡೆದುಕೊಂಡು ಬಂದು ಏಕಾಏಕಿ ಕುತ್ತಿಗೆಗೆ ಕೈಹಾಕಿ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಈ ವೇಳೆ ಇನ್ನೊಂದು ಸರ ತುಂಡಾಗಿ ನೆಲಕ್ಕೆ ಬಿದ್ದಿದೆ. ಆದ್ರೆ, ಅದನ್ನು ಎತ್ತಿಕೊಳ್ಳಲು ಹೆದರಿದ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದಾನೆ.