ಕಾರವಾರ: ಎರಡು ದಿನದ ಹಿಂದೆ ಎಸ್ಕೇಪ್ ಆಗಿ ಸೆರೆಯಾಗಿದ್ದ ಕೊರೊನಾ ಸೋಂಕಿತ ಬೈಕ್ ಕಳ್ಳ ನಿನ್ನೆ ತಡರಾತ್ರಿ ಮತ್ತೆ ಕೋವಿಡ್ ವಾರ್ಡ್ನಿಂದ ಪರಾರಿಯಾಗಿದ್ದು, ಸೋಂಕಿತ ಕಳ್ಳನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಕಾರವಾರದ ಕೋವಿಡ್ ವಾರ್ಡ್ನಲ್ಲಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ - ಕಾರವಾರ ಸೋಂಕಿತ ಕಳ್ಳ ಮತ್ತೆ ಪರಾರಿ
ಕಾರವಾರ ಕೋವಿಡ್ ವಾರ್ಡ್ನಿಂದ ಎರಡು ದಿನದ ಹಿಂದೆ ಎಸ್ಕೇಪ್ ಆಗಿದ್ದ ಕೊರೊನಾ ಸೋಂಕಿತ ಬೈಕ್ ಕಳ್ಳ ನಿನ್ನೆ ತಡರಾತ್ರಿ ಮತ್ತೆ ಪರಾರಿಯಾಗಿದ್ದಾನೆ.
![ಕಾರವಾರದ ಕೋವಿಡ್ ವಾರ್ಡ್ನಲ್ಲಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ thief ran away from kovid ward again](https://etvbharatimages.akamaized.net/etvbharat/prod-images/768-512-7840555-thumbnail-3x2-news.jpg)
ಹೌದು, ಧಾರವಾಡ ಮೂಲದ ವ್ಯಕ್ತಿಯು ಬೈಕ್ ಕದ್ದು ಇತ್ತೀಚೆಗೆ ಶಿರಸಿಯಲ್ಲಿ ಬಂಧಿತನಾಗಿದ್ದ. ಆದರೆ, ಆತನಲ್ಲಿ ಸೋಂಕು ಪತ್ತೆಯಾಗಿ ಭಾನುವಾರ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಕಳ್ಳ ಸೋಮವಾರ ಮುಂಜಾನೆ ಕೋವಿಡ್ ವಾರ್ಡ್ನಲ್ಲಿದ್ದ ಎರಡು ಮೊಬೈಲ್ ಕದ್ದು ಪರಾರಿಯಾಗಿದ್ದ. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಕದ್ರಾ ಬಳಿ ಬಂಧಿಸಿದ್ದರು.
ಆದರೆ, ಮಂಗಳವಾರ ತಡರಾತ್ರಿ 12 ಗಂಟೆಗೆ ಮತ್ತೆ ಪರಾರಿಯಾಗಿದ್ದಾನೆ. ಕೊವಿಡ್ ವಾರ್ಡ್ನ ವಿಶೇಷ ಕೋಣೆಯಲ್ಲಿದ್ದ ಈತನಿಗೆ ಚಿಕಿತ್ಸೆ ನೀಡಲು ನರ್ಸ್ ಒಬ್ಬರು ತೆರಳಿ ನೋಡಿದಾಗ ಹಿಂಬದಿ ಬಾಗಿಲು ಮುರಿದು ಪರಾರಿಯಾಗಿರುವುದು ಪತ್ತೆಯಾಗಿದೆ. ಪೊಲೀಸರು ಚಾಲಾಕಿ ಕಳ್ಳನಿಗಾಗಿ ಹುಡುಕಾಡ ತೊಡಗಿದ್ದಾರೆ.