ಭಟ್ಕಳ: ಪ್ರಸ್ತುತ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಕೊರೊನಾ ವೈರಸ್ ಜನರಲ್ಲಿ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲ. ಹೀಗಿರುವಾಗ ಇದರ ನಿಯಂತ್ರಣಕ್ಕೆ ಸಾಮಾಜಿಕ ಅಂತರದೊಂದಿಗೆ ಸ್ಯಾನಿಟೈಸರ್, ಮಾಸ್ಕ್ ಮೊದಲಾದವುಗಳನ್ನು ಬಳಸುವಂತೆ ಸರ್ಕಾರದಿಂದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೆ ಈ ಆದೇಶವನ್ನು ಸಾಕಷ್ಟು ಬ್ಯಾಂಕ್‌ಗಳು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಭಟ್ಕಳ ತಾಲೂಕಿನ ಎಟಿಎಂಗಳಲ್ಲಿ ಕೊರೊನಾ ಮುನ್ನೆಚ್ಚರಿಕೆ ಮರೀಚಿಕೆ: ಗ್ರಾಹಕರಿಗೆ ಆತಂಕ - Bhatkala atm center
ಕೊರೊನಾ ಸೋಂಕು ಅತೀ ವೇಗವಾಗಿ ಹರಡುವ ಕಾರಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಸುರಕ್ಷತಾ ಕ್ರಮ ವಹಿಸಬೇಕು. ಹಣ ತೆಗೆಯುವುದಕ್ಕೆ ಬರುವ ಜನರ ಬಳಕೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನ ನೀಡಿವೆ. ಆದರೆ, ಇದ್ಯಾವುದನ್ನು ಭಟ್ಕಳದ ಬ್ಯಾಂಕ್‌ಗಳು ಗಮನಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಭಟ್ಕಳ
ತಾಲೂಕಿನಲ್ಲಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಹಲವು ಎಟಿಎಂಗಳು ಇವೆ. ಆದರೆ ಈ ಪೈಕಿ ಬೆರಳಣಿಕೆಯಷ್ಟು ಬ್ಯಾಂಕ್‌ಗಳು ಮಾತ್ರ ಸ್ಯಾನಿಟೈಸರ್ ಇರಿಸಿದ್ದು ಬಿಟ್ಟರೆ, ಉಳಿದೆಡೆ ಇವುಗಳ ಸುಳಿವೂ ಕಂಡು ಬರುತ್ತಿಲ್ಲ.
ಎಟಿಎಂಗಳಲ್ಲಿ ಇಲ್ಲ ಸ್ಯಾನಿಟೈಸರ್:ಕೊರೊನಾ ಸೋಂಕು ಅತೀ ವೇಗವಾಗಿ ಹರಡುವ ಕಾರಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಸುರಕ್ಷತಾ ಕ್ರಮ ವಹಿಸಬೇಕು. ಹಣ ತೆಗೆಯುವುದಕ್ಕೆ ಬರುವ ಜನರ ಬಳಕೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕೆಂಬ ಕಟ್ಟುನಿಟ್ಟಿನ ನಿರ್ದೇಶನ ನೀಡಿವೆ. ಆದರೆ, ಇದರ ಹೊರತಾಗಿಯೂ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಸ್ಯಾನಿಟೈಸರ್ ಕಂಡುಬರುತ್ತಿಲ್ಲ.
ಸರ್ಕಾರಿ ಕಚೇರಿ, ಬ್ಯಾಂಕ್, ಮೆಡಿಕಲ್ ಶಾಪ್, ಅಂಗಡಿಗೆ ಬರುವ ಜನರು ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. ಎಟಿಎಂಗಳಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಹಣ ತೆಗೆಯಲು ಬರುವ ಮಂದಿಗೆ ಆತಂಕ ಎದುರಾಗಿದೆ. ಹೀಗಾಗಿ ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಡುವ ವ್ಯವಸ್ಥೆ ಮಾಡಬೇಕು ಎಂಬುದು ಹಲವರ ಒತ್ತಾಯವಾಗಿದೆ. ಇನ್ನು ಕೆಲವು ಕಡೆ ಸಾಮಾಜಿಕ ಅಂತರ ಸೇರಿದಂತೆ ಮಾಸ್ಕ್ ಇಲ್ಲದೇ ಜನರು ಬರುವುದು ಹಾಗೂ ವ್ಯವಹರಿಸುತ್ತಿರುವುದು ಕಂಡು ಬರುತ್ತಿದೆ.
ಸಾರ್ವಜನಿಕರಲ್ಲಿ ಭಯ:ಮುರುಡೇಶ್ವರ ಭಾಗಕ್ಕೆ ಈಗಾಗಲೇ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಪ್ರವಾಸಿಗಳು ಬರುತ್ತಿದ್ದಾರೆ. ಒಂದು ವೇಳೆ ಪಾಸಿಟಿವ್ ಇರುವ ವ್ಯಕ್ತಿ ಎಟಿಎಂಗೆ ಬಂದರೆ ಆತನಿಂದ ಇತರ ಗ್ರಾಹಕರಿಗೂ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ. ಎ.ಟಿ.ಎಂ. ಯಂತ್ರದ ಪರದೆ, ಬಾಗಿಲು ಇನ್ನಿತರ ವಸ್ತುಗಳನ್ನು ಗ್ರಾಹಕರು ಮುಟ್ಟುವ ಸಾಧ್ಯತೆ ಇರುವುದರಿಂದ ಇಲ್ಲಿಯ ಸಾರ್ವಜನಿಕರು ಭಯ ಪಡುವಂತಾಗಿದೆ.
ಇನ್ನಾದರು ತಾಲೂಕಿನ ಬ್ಯಾಂಕ್‌ಗಳ ವ್ಯಾಪ್ತಿಗೆ ಒಳಪಡುವ ಎ.ಟಿ.ಎಂ ಗಳಲ್ಲಿ ಮುನ್ನೆಚ್ಚರಿಕೆ ಕ್ರಮದ ಜೊತೆಗೆ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.