ಕಾರವಾರ : ಮೇ 31 ಭಾನುವಾರದಂದು ಬೆಳಗ್ಗೆ 7.00 ಗಂಟೆಯಿಂದ ರಾತ್ರಿ 7.00 ಗಂಟೆವರೆಗೆ ಜಿಲ್ಲಾದ್ಯಂತ ಕರ್ಫ್ಯೂವನ್ನು ತೆರವುಗೊಳಿಸಿ ವಿನಾಯಿತಿ ನೀಡಲಾಗಿದೆ ಎಂದು ಉ.ಕ ಡಿಸಿ ಹೇಳಿದ್ದಾರೆ.
ನಾಳೆ ಉತ್ತರ ಕನ್ನಡದಲ್ಲಿ ಲಾಕ್ ಡೌನ್ ಇಲ್ಲ : ಡಿಸಿ ಹರೀಶಕುಮಾರ್ ಸ್ಪಷ್ಟನೆ - ಉತ್ತರ ಕನ್ನಡ ಸುದ್ದಿ
ನಾಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ಫ್ಯೂ ಇಲ್ಲ. ಆದ್ರೆ ನಿರ್ಬಂಧಗಳು ಸಹಜವಾಗಿ ಮುಂದುವರೆಯುತ್ತವೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.
ಡಿಸಿ ಹರೀಶಕುಮಾರ್
ಇದರೊಂದಿಗೆ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ತೆರೆಯಬಹುದಾಗಿದೆ. ಆದರೆ, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಉಳಿದಂತೆ ನಿರ್ಬಂಧಗಳು ಸಹಜವಾಗಿ ಮುಂದುವರೆಯುತ್ತವೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.