ಕರ್ನಾಟಕ

karnataka

ETV Bharat / state

ಮುರುಡೇಶ್ವರ ಕಾಯ್ಕಿಣಿ ಗ್ರಾ.ಪಂಚಾಯತಿಯಲ್ಲಿ ಕಳ್ಳತನ - Murudeshwara Latest News

ಕಾಯ್ಕಿಣಿ ಗ್ರಾಮ ಪಂಚಾಯತಿ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬೀಗ ಮುರಿದು 1,454 ರೂ. ನಗದು ಹಾಗೂ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಕಳ್ಳತನಗೈದಿರುವ ಘಟನೆ ನಡೆದಿದೆ.

ಮುರುಡೇಶ್ವರ ಕಾಯ್ಕಿಣಿ ಗ್ರಾಮ ಪಂಚಾಯತಿ
ಮುರುಡೇಶ್ವರ ಕಾಯ್ಕಿಣಿ ಗ್ರಾಮ ಪಂಚಾಯತಿ

By

Published : Oct 22, 2020, 5:46 PM IST

ಭಟ್ಕಳ:ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತಿ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬೀಗ ಮುರಿದ ಕಳ್ಳರು, ನಗದು ಹಾಗೂ ಕಂಪ್ಯೂಟರ್ ಹಾರ್ಡ್ ಡಿಸ್ಕ್​ ಕಳ್ಳತನ ಮಾಡಿದ್ದಾರೆ.

ಕಚೇರಿ ಒಳಗಿನ ಕಪಾಟಿನ ಬಾಗಿಲು ತೆರೆದ ಕಳ್ಳರು ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಸಿಬ್ಬಂದಿಯ ಟೇಬಲ್ ಬಾಗಿಲು ತೆರೆದು ಅದರಲ್ಲಿದ್ದ ತೆರಿಗೆ ವಸೂಲಿ 1,454 ರೂ.ಗಳನ್ನು ಎಗರಿಸಿದ್ದಾರೆ. ಇನ್ನು ಪಂಚಾಯತಿ ಕಾರ್ಯದರ್ಶಿಯ ಕೋಣೆಯಲ್ಲಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್​ ಅನ್ನು ಸಹ ಕದ್ದೊಯ್ದಿದ್ದಾರೆ.

ಕಾಯ್ಕಿಣಿ ಗ್ರಾಮ ಪಂಚಾಯತಿಯಲ್ಲಿ ಕಳ್ಳತನ

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಿಶೀಲನೆಗೆಂದು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.

ಈ ಕುರಿತು ಕಾಯ್ಕಿಣಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಂಬೋದರ ಚಂದ್ರಕಾಂತ ಗಾಂವ್ಕರ್ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details