ಕರ್ನಾಟಕ

karnataka

ETV Bharat / state

ಮರಳಿ ಮನೆ ಸೇರಲು ಕಾರ್ಮಿಕರ ಹಂಬಲ: ಅರ್ಜಿ ತುಂಬಲು ಪರದಾಟ - ವಲಸೆ ಕಾರ್ಮಿಕರಿಗೆ ಸೇವಾಸಿಂಧು ಯೋಜನೆ

ಮೂರನೇ ಹಂತದ ಲಾಕ್​ಡೌನ್​ ಘೋಷಣೆ ನಂತರ ವಲಸೆ ಕಾರ್ಮಿಕರಿಗೆ ಸೇವಾಸಿಂಧು ಯೋಜನೆಯಡಿ ತವರಿಗೆ ತೆರಳಲು ಅನುಮತಿ ನೀಡಲಾಗಿದೆ. ಇದರಿಂದ ಮನೆಗೆ ತೆರಳಲು ಕಾತುರದಿಂದ ಕಾಯುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಕೆಗಾಗಿ ಮುಗಿಬಿದ್ದಿದ್ದಾರೆ.

Crowd to fill the application
ಅರ್ಜಿ ತುಂಬಲು ಸಾಲುಗಟ್ಟಿರುವ ಜನರು

By

Published : May 4, 2020, 4:34 PM IST

ಕಾರವಾರ:ಹೊರ ರಾಜ್ಯದಿಂದ ಹೊಟ್ಟೆಪಾಡಿಗಾಗಿ ಇತರೆಡೆಗೆ ಬಂದು ಲಾಕ್​ಡೌನ್ ನಿಂದಾಗಿ ಕೆಲಸ ಕಾರ್ಯವಿಲ್ಲದೇ ಸಂಕಷ್ಟಕ್ಕೆ ಸಿಲಕಿದ್ದ ಕಾರ್ಮಿಕರಿಗೆ ಊರಿಗೆ ವಾಪಸಾಗಲು ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ಸೇವಾಸಿಂಧು ವೆಬ್​ಸೈಟ್​ ಸಹ ಕಾರ್ಯಾರಂಭಗೊಳಿಸಿದೆ. ಹೀಗಾಗಿಯೇ ಅರ್ಜಿ ಸಲ್ಲಿಕೆಗೆ ವಲಸಿಗರು ಮುಗ್ಗಿಬಿದ್ದಿದ್ದಾರೆ‌.

ಅರ್ಜಿ ತುಂಬಲು ಸಾಲುಗಟ್ಟಿರುವ ಜನರು

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆಯಿಂದಲೇ ನೂರಾರು ಮಂದಿ ಹೊರ ರಾಜ್ಯದ ಕಾರ್ಮಿಕರು ಅರ್ಜಿ ಸಲ್ಲಿಕೆಗಾಗಿ ಕಾದು ನಿಂತಿದ್ದಾರೆ. ಮೂರನೇಯ ಹಂತದ ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯಕ್ಕೆ ವಾಪಸ್​ ಆಗುವ ಕಾರ್ಮಿಕರಿಗೆ ಸೇವಾಸಿಂಧು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ ಕಾರ್ಮಿಕರಿಗೆ ತಮ್ಮ ರಾಜ್ಯಕ್ಕೆ ವಾಪಸ್​​ ಆಗಲು ಅವಕಾಶ ನೀಡುತ್ತಿರುವ ಹಿನ್ನೆಲೆ, ಜನರು ಆನ್​ಲೈನ್​ ಅರ್ಜಿ ತುಂಬುವ ಸಲುವಾಗಿ ಸಾಲುಗಟ್ಟಿ ನಿಂತಿದ್ದಾರೆ.

ಮನೆಗೆ ತೆರಳುವ ಆತುರದಲ್ಲಿರುವ ಸಾಕಷ್ಟು ಮಂದಿ ಕಾರ್ಮಿಕರು, ಆನ್‌ಲೈನ್ ನೋಂದಣಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಕ್ಯೂನಲ್ಲಿ ನಿಂತಿದ್ದಾರೆ.

ABOUT THE AUTHOR

...view details