ಕರ್ನಾಟಕ

karnataka

ETV Bharat / state

ಮೂರು ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಜೋಡಣೆ: ಪ್ರಯಾಣಿಕರಿಗೆ ಹೊಸ ಅನುಭವ

ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಮಾರ್ಗವಾಗಿ ಸಾಗುವ ಮೂರು ರೈಲುಗಳಿಗೆ ವಿಸ್ಟಾಡೋಮ್ ಕೋಚ್ (ಗಾಜಿನ ಬೋಗಿ) ಗಳನ್ನು ಜೋಡಿಸಲಾಗುತ್ತಿದೆ.

By

Published : Jul 2, 2021, 8:45 PM IST

ವಿಸ್ಟಾಡೋಮ್ ಕೋಚ್
Vistadome coach

ಕಾರವಾರ: ಪ್ರಕೃತಿ ಹಾಗೂ ಕಡಲತೀರದ ಸೌಂದರ್ಯದಿಂದಲೇ ಹೆಸರು ವಾಸಿಯಾಗಿರುವ ಕರಾವಳಿಯಲ್ಲಿ ಇದೀಗ ಮೂರು ರೈಲುಗಳು ತನ್ನ ಬೋಗಿಗಳಲ್ಲಿ ಎರಡು ವಿಸ್ಟಾಡೋಮ್ ಕೋಚ್ (ಗಾಜಿನ ಬೋಗಿ) ಗಳಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸಿದ್ಧವಾಗಿದ್ದು ಪ್ರಯಾಣಿಕರಿಗೆ ಹೊಸ ಅನುಭವ ನೀಡಲು ಮುಂದಾಗಿವೆ.

ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಮಾರ್ಗವಾಗಿ ಸಾಗುವ ಮೂರು ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ. ಜು.7 ರಂದು ಯಶವಂತಪುರದಿಂದ ಸಂಚರಿಸುವ ಯಶವಂತಪುರ-ಕಾರವಾರ ವಿಶೇಷ ಎಕ್ಸ್​ಪ್ರೆಸ್​ (ರೈಲು ಸಂಖ್ಯೆ: 06211/ 06212), ಜು.8 (ರೈಲು ಸಂಖ್ಯೆ: 06575/ 06576) ಮತ್ತು ಜು.10 ರಂದು (ರೈಲು ಸಂಖ್ಯೆ: 06575/ 06576) ಯಶವಂತಪುರದಿಂದ ತೆರಳುವ ಯಶವಂತಪುರ- ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್​ಪ್ರೆಸ್​ಗಳಿಗೆ ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ.

ಈ ರೈಲುಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯು ನಾಳೆಯಿಂದ (ಜು.3) ಪ್ರಾರಂಭವಾಗಲಿದ್ದು, ಶತಾಬ್ದಿ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯುಟಿವ್ ಕ್ಲಾಸ್‌ನ ದರದಂತೆ ಟಿಕೆಟ್ ಬೆಲೆ ಇರಲಿದೆ.

ಗಾಜಿನ ಬೋಗಿಯಲ್ಲಿ ಪ್ರಯಾಣಿಕರು: ವಿಸ್ಟಾಡೋಮ್ ಎಂದರೆ ಪಾರದರ್ಶಕ ಬೋಗಿಗಳು. ಸಾಮಾನ್ಯವಾಗಿ ರೈಲು ಬೋಗಿಗಳಿಗೆ ಕಿಟಕಿ ಬಿಟ್ಟರೆ ಬಾಗಿಲುಗಳಲ್ಲಿ ಮಾತ್ರ ಹೊರ ಭಾಗ ವೀಕ್ಷಿಸಬಹುದು. ಆದರೆ ವಿಸ್ಟಾಡೋಮ್ ಬೋಗಿಯ ಒಳಗೆ ಕುಳಿತಲ್ಲೇ ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಬೋಗಿಯ ಮೇಲ್ಭಾಗ ಹಾಗೂ ಕಿಟಕಿಯ ಭಾಗಗಳು ಬೃಹತ್ ಗಾತ್ರದ ಗಾಜುಗಳನ್ನು ಹೊಂದಿರುತ್ತದೆ. ಪ್ರಸ್ತುತ ಮಳೆಗಾಲ ಇರುವುದರಿಂದ ಯಶವಂತಪುರದಿಂದ ಕಾರವಾರದವರೆಗಿನ ಮಾರ್ಗ ಸಂಪೂರ್ಣ ಹಸಿರಿನಿಂದ ಕೂಡಿದ್ದು, ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮತ್ತು ರೈಲಿನ ವೇಗವನ್ನು ಹೆಚ್ಚಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ABOUT THE AUTHOR

...view details