ಕಾರವಾರ:ಮರವೊಂದು ಬುಡ ಸಮೇತ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರದ ಕೆಇಬಿ ಬಳಿ ಈ ಘಟನೆ ನಡೆದಿದೆ.
ಕಾರವಾರದಲ್ಲಿ ಕಾರಿನ ಮೇಲೆ ಬಿದ್ದ ಮರ... ಪವಾಡ ಸದೃಶ ರೀತಿ ಮಹಿಳೆಯರು ಪಾರು - karwat KEB office
ಕಾರವಾರ ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿ ಮರ ಮಳೆಯಿಂದಾಗಿ ಬುಡ ಸಮೇತ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಮೇಲೆ ಬಿದ್ದ ಮರ
ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿಯ ಮರ ಮಳೆಯಿಂದಾಗಿ ಬುಡ ಸಮೇತ ಬಿದ್ದಿದೆ. ಅಲ್ಲೇ ಸಮೀಪ ಮಸೀದಿಯ ಬಳಿ ಹುಬ್ಬಳ್ಳಿ ಮೂಲದ ಅಬ್ದುಲ್ ರಜಾಕ್ ಸವಣೂರು ಎಂಬುವವರು ಕಾರು ನಿಲ್ಲಿಸಿದ್ದರು. ಅದರಲ್ಲಿ ಅವರ ಕುಟುಂಬದ ಇಬ್ಬರು ಮಹಿಳೆಯರಿದ್ದರು.
ಮರ ಬಿದ್ದಾಗ ಅವರು ಕಾರಿನಲ್ಲೇ ಇದ್ದರು. ಕಾರಿನ ಹಿಂಭಾಗ ಹಾಗೂ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಆದ್ರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ್ ಆರ್.ವಿ. ಗಟ್ಟಿ, ಕಂದಾಯ ಇಲಾಖೆಯ ಅಧಿಕಾರಿ ಶ್ರೀಧರ್, ಅರಣ್ಯ ಇಲಾಖೆಯ ಮೋಹನ್ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.