ಕರ್ನಾಟಕ

karnataka

ETV Bharat / state

ಕಾಳಿಂಗ ಸರ್ಪನ ಉಪಟಳ: ನಾಡಿಂದ ಕಾಡಿಗೆ ಪಯಣ, ಜನರ ನಿಟ್ಟುಸಿರು - kannadanews

ಆಗಾಗ್ಗೆ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸುತ್ತಿದ್ದ ಸುಮಾರು 10 ಅಡಿಗೂ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.

ಜನರನ್ನು ಬೆಚ್ಚಿ ಬೀಳಿಸಿದ್ದ ಕಾಳಿಂಗ ಮರಳಿ ಕಾಡಿಗೆ

By

Published : Jun 8, 2019, 11:17 PM IST

ಶಿರಸಿ : ಆಗಾಗ್ಗೆ ಕಾಣಿಸಿಕೊಂಡು ಜನರನ್ನು ಬೆಚ್ಚಿಬೀಳಿಸುತ್ತಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ಹಿಡಿದು ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡದ ಶಿರಸಿಯ ಮೆಣಸಿಯಲ್ಲಿ ನಡೆದಿದೆ.

ಜನರನ್ನು ಬೆಚ್ಚಿ ಬೀಳಿಸಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.

ತಾಲೂಕಿನ ಹುಲೇಕಲ್ ಅರಣ್ಯ ವ್ಯಾಪ್ತಿಯ ಕಬ್ಜಕುಳ್ಳಿ ಗ್ರಾಮದ ಶಾಲೆಯ ರಸ್ತೆಯಲ್ಲಿ 10 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪ ಮುಂಜಾನೆ ವೇಳೆಯಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತ್ತು. ನಂತರ ಉರಗ ತಜ್ಞ ಮನು ಸ್ಥಳಕ್ಕೆ ಆಗಮಿಸಿ ಅರಣ್ಯ ಅಧಿಕಾರಿಗಳ ಸಹಕಾರದಲ್ಲಿ ಸುಮಾರು 2 ತಾಸಿಗೂ ಅಧಿಕ ಕಾಲ ಪ್ರಯತ್ನಿಸಿ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

ABOUT THE AUTHOR

...view details