ಕಾರವಾರ: ಎರಡು ದಿನದಿಂದ ತೋಟದ ಬಳಿಯೇ ಬೀಡು ಬಿಟ್ಟು ಆತಂಕ ಸೃಷ್ಟಿಸಿದ್ದ ಬೃಹತ್ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಕುಮಟಾದ ಮಿರ್ಜಾನ್ ಸಮೀಪದ ಮುಗ್ವೇಕಸನ್ವಾಡಿಯಲ್ಲಿ ನಡೆದಿದೆ.
2 ದಿನ ತೋಟದಲ್ಲಿಯೇ ಬೀಡು ಬಿಟ್ಟ ಕಾಳಿಂಗ ಸರ್ಪ... ಕೊನೆಗೂ ಸೆರೆ ಹಿಡಿದು ಕಾಡಿಗೆ
ಎರಡು ದಿನದಿಂದ ಪದ್ಮಾಕ್ಷ ನಾಯ್ಕ ಎಂಬುವವರ ತೋಟದ ಬಳಿಯೇ ಬೀಡು ಬಿಟ್ಟಿದ್ದ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಕುಮಟಾದ ಮಿರ್ಜಾನ್ ಸಮೀಪದ ಮುಗ್ವೇಕಸನ್ವಾಡಿಯಲ್ಲಿ ನಡೆದಿದೆ.
2 ದಿನ ತೋಟದಲ್ಲಿಯೇ ಬೀಡು ಬಿಟ್ಟ ಕಾಳಿಂಗ ಸರ್ಪ... ಕೊನೆಗೂ ಸೆರೆ ಹಿಡಿದು ಕಾಡಿಗೆ
ಪದ್ಮಾಕ್ಷ ನಾಯ್ಕ ಎಂಬುವವರ ಮನೆಯ ತೋಟದಲ್ಲಿ ಕಳೆದ 2 ದಿನದಿಂದ 15 ಅಡಿ ಉದ್ದದ ಕಾಳಿಂಗಸರ್ಪ ಓಡಾಡುತ್ತಿತ್ತು. ಮೊದಲು ಗಮನಿಸಿದಾಗ ಹೋಗಬಹುದು ಎಂದುಕೊಂಡಿದ್ದರಾದರೂ, ಎರಡನೇ ದಿನವೂ ಅಲ್ಲಿಯೇ ಕಾಣಿಸಿಕೊಂಡಿತ್ತು. ಇದರಿಂದ ಆತಂಕಕ್ಕೊಳಗಾದ ಜನರು ತೋಟಕ್ಕೆ ತೆರಳುವುದನ್ನೇ ಬಿಟ್ಟು ಉರಗ ತಜ್ಞ ಪವನ ನಾಯ್ಕ ಕಲಭಾಗ ಅವರಿಗೆ ವಿಷಯ ತಿಳಿಸಿದ್ದರು.
ಬಳಿಕ ಸ್ಥಳಕ್ಕಾಗಮಿಸಿದ ಪವನ, ಬೃಹತ್ ಗಾತ್ರದ ವಿಷ ಸರ್ಪವನ್ನು ನಾಜೂಕಾಗಿ ಹಿಡಿದು, ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದಾರೆ.