ಶಿರಸಿ: ಜಿಲ್ಲೆಯನ್ನು ಹಳದಿ ವಲಯವಾಗಿ ಸೇರ್ಪಡೆ ಮಾಡಿರುವ ಪರಿಣಾಮ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಲಾಕ್ಡೌನ್ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ ದೊರೆತಿದೆ.
ವಲಸೆ ಕಾರ್ಮಿಕರಿಗೆ ತವರು ಸೇರೋ ಭಾಗ್ಯ: ಶಿರಸಿ ತಾಲೂಕು ಆಡಳಿತದಿಂದ ವ್ಯವಸ್ಥೆ - ಉತ್ತರ ಕನ್ನಡ ಜಿಲ್ಲೆಯ ಶಿರಸಿ
ಲಾಕ್ಡೌನ್ನಲ್ಲಿ ಸಿಲುಕಿದ್ದ 89 ವಲಸೆ ಕಾರ್ಮಿಕರನ್ನು 4 ಬಸ್ಗಳಲ್ಲಿ ಶಿರಸಿ ತಾಲೂಕು ಆಡಳಿತ ರವಾನಿಸಿದ್ದು, ಕುಷ್ಟಗಿ, ಹಾನಗಲ್, ಕಲಘಟಗಿ, ಬೈಂದೂರು ಸೇರಿದಂತೆ ವಿವಿಧ ಕಡೆಗಳಿಗೆ ರವಾನಿಸಲಾಗಿದೆ.
ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಿಲುಕಿದ್ದ 89 ವಲಸೆ ಕಾರ್ಮಿಕರಿಗೆ ತವರು ಭಾಗ್ಯ ಲಭಿಸಿದ್ದು, ಶಿರಸಿ ತಾಲೂಕು ಆಡಳಿತ ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿದೆ. 4 ಬಸ್ಗಳಲ್ಲಿ ಕಾರ್ಮಿಕರನ್ನು ಶಿರಸಿ ತಾಲೂಕು ಆಡಳಿತ ರವಾನಿಸಿದ್ದು, ಕುಷ್ಟಗಿ, ಹಾನಗಲ್, ಕಲಘಟಗಿ, ಬೈಂದೂರು ಸೇರಿದಂತೆ ವಿವಿಧ ಕಡೆಗಳಿಗೆ ರವಾನಿಸಲಾಗಿದೆ.