ಕರ್ನಾಟಕ

karnataka

ETV Bharat / state

ಮಧ್ಯರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಎರಡನೇ ಚಾರ್ಟೆಡ್ ವಿಮಾನದ ಆಗಮನ - Bhatkala

ಕೊರೊನಾದಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿದ್ದ 181 ಜನರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಮಂಗಳವಾರ ದುಬೈನಿಂದ ಮಂಗಳೂರಿಗೆ ತಲುಪಲಿದೆ ಎಂದು ಭಟ್ಕಳ ಪ್ರಸಿದ್ಧ ಉದ್ಯಮಿ ಮತ್ತು ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್‌ನ ಉಪಾಧ್ಯಕ್ಷ ಅತೀಕ್-ಉರ್-ರೆಹಮಾನ್ ಮುನಿರಿ ತಿಳಿಸಿದ್ದಾರೆ.

Bhatkal
ಮಂಗಳೂರಿಗೆ ತಲುಪಲಿರುವ ಎರಡನೇ ಚಾರ್ಟೆಡ್ ವಿಮಾನ

By

Published : Jul 8, 2020, 12:07 AM IST

ಭಟ್ಕಳ: ಕೊರೊನಾದಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿದ್ದ 181 ಜನರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಮಂಗಳವಾರ ದುಬೈನಿಂದ ಮಂಗಳೂರಿಗೆ ತಲುಪಲಿದೆ ಎಂದು ಭಟ್ಕಳ ಪ್ರಸಿದ್ಧ ಉದ್ಯಮಿ ಮತ್ತು ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್‌ನ ಉಪಾಧ್ಯಕ್ಷ ಅತೀಕ್-ಉರ್-ರೆಹಮಾನ್ ಮುನಿರಿ ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಸ್ಪೈಸ್‌ಜೆಟ್ ಮಂಗಳೂರಿಗೆ ಹಾರಲಿದೆ ಎಂದು ಅವರು ಹೇಳಿದರು. ಬೆಳಗ್ಗೆ 1 ಗಂಟೆ ಸುಮಾರಿಗೆ ಈ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ದುಬೈನಿಂದ ಪ್ರಯಾಣಿಕರಿಗೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣ ತಲುಪಲು ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.

ಎರಡನೇ ಚಾರ್ಟೆಡ್ ವಿಮಾನ ಇಂದು ಮಧ್ಯರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಮಂಗಳೂರಿನಲ್ಲಿ ಎಂದಿನಂತೆ ಎಲ್ಲಾ ಪ್ರಯಾಣಿಕರನ್ನು ಭಟ್ಕಲ್ ಜಮಾಅತುಲ್ ಮುಸ್ಲೀಮೀನ್ ಮಂಗಳೂರು ಇದರ ಪದಾಧಿಕಾರಿಗಳು ಸ್ವಾಗತಿಸಿ ಅವರಿಗೆ ಊಟ ತಿಂಡಿಯ ವ್ಯವಸ್ಥೆಯನ್ನೂ ಮಾಡಿ ನಂತರ 5 ವಿಶೇಷ ಬಸ್ಸುಗಳ ಮೂಲಕ ಭಟ್ಕಳಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿರುವುದಾಗಿ ಅವರು ಮಾಹಿತಿ ನೀಡಿದರು. ಇನ್ನು ವಿಮಾನವು 175 ಆಸನಗಳನ್ನು ಹೊಂದಿದ್ದರೆ, 6 ಸಣ್ಣ ಮಕ್ಕಳು ಸಹ ಪ್ರಯಾಣಿಕರೊಂದಿಗೆ ಇರಲಿದ್ದಾರೆ, ಹೀಗಾಗಿ ಒಟ್ಟು 181 ಪ್ರಯಾಣಿಕರು ಭಟ್ಕಳ ತೆರಳಲಿದ್ದಾರೆ. ಭಟ್ಕಳಕ್ಕೆ ಬರುವ ಹೆಚ್ಚಿನ ಪ್ರಯಾಣಿಕರಲ್ಲಿ ಗರ್ಭಿಣಿಯರು ಮತ್ತು ವೃದ್ಧರು ಸೇರಿದ್ದು ದುಬೈಯಲ್ಲಿ ಲಾಕ್​ಡೌನ್​ನಲ್ಲಿ ಕಷ್ಟದಲ್ಲಿದ್ದವರು ಎಂದು ತಿಳಿದು ಬಂದಿದೆ.

ದುಬೈ ಮತ್ತು ಯುಎಇಯ ಕೊರೊನಾ ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ಭಟ್ಕಳ ಮತ್ತು ಅದರ ಸುತ್ತಲಿನ ಜನರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಟ್ಕಳ ಮೂಲದ ದುಬೈನ ಪ್ರಸಿದ್ಧ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಚಾರ್ಟರ್ಡ್ ವಿಮಾನದಲ್ಲಿ ಭಟ್ಕಳಕ್ಕೆ ಮರಳಿ ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಜೂನ್ 12 ರಂದು ಮೊದಲ ಚಾರ್ಟೆಡ್ ವಿಮಾನವು ದುಬೈಯಿಂದ ಮಂಗಳೂರಿಗೆ ಬಂದಿತ್ತು. ಇದಾದ ನಂತರ ಮತ್ತಷ್ಟು ಜನರು ತಮ್ಮ ತಾಯ್ನಾಡಿಗೆ ತೆರೆಳಲು ಬೇಡಿಕೆಯಿಟ್ಟ ಪರಿಣಾಮ ಮುನಿರಿಯವರು ಎರಡನೇ ಚಾರ್ಟೆಡ್ ವಿಮಾನ ಹಾರಾಟಕ್ಕೆ ಸಿದ್ದತೆಯನ್ನು ನಡೆಸಿದ್ದರು. ಎಲ್ಲವೂ ಸರಿ ಹೋಗಿದ್ದರೆ ಜೂ.23ರಂದೇ ಎರಡನೇ ವಿಮಾನದ ಮೂಲಕ ಜನರು ಭಟ್ಕಳವನ್ನು ಸೇರಿಕೊಳ್ಳುತ್ತಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇಂದು ಅಂತಿಮಾವಾಗಿ ಭಟ್ಕಳಿಗರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನವು ದುಬೈಯ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದ ಮೂಲಕ ಮಂಗಳೂರು ತಲುಪಲಿದೆ.

ಈ ವಿಮಾನದಲ್ಲಿ ಉತ್ತರಕನ್ನಡ ಜಿಲ್ಲೆಯ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮುರುಡೇಶ್ವರ, ಮಂಕಿ, ಹೊನ್ನಾವರ, ಶಿರಸಿ ಸೇರಿದಂತೆ ಭಟ್ಕಳದ ಪ್ರಯಾಣಿಕರು ಒಳಗೊಂಡಿದ್ದಾರೆ ಎಂದು ಅತೀಕ್-ಉರ್-ರೆಹಮಾನ್ ಮುನಿರಿ ಹೇಳಿದರು. ಭಾರತ ಸರ್ಕಾರವು ದಿನಾಂಕವನ್ನು ಪದೇ ಪದೇ ರದ್ದುಗೊಳಿಸಿದ್ದರಿಂದ ಈ ಬಾರಿ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು.

ಇಂತಹ ಸಂದರ್ಭದಲ್ಲಿ ಭಟ್ಕಳದ ದುಬೈ ವಾಸಿಗರು ಈ ಬಾರಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದು ವಿಶೇಷವಾಗಿ ಸಾಮುದಾಯಿಕ ನಾಯಕ ಎಸ್.ಎಂ. ಸೈಯದ್ ಖಲೀಲ್-ಉರ್-ರೆಹಮಾನ್. ಸಾಹಿಬ್ ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಮುನಿರಿಯವರು ಧನ್ಯವಾದಗಳನ್ನು ಸಲ್ಲಿಸಿದರು.

ABOUT THE AUTHOR

...view details