ಶಿರಸಿ:ಅತಿ ವೇಗ, ತಿಥಿ ಬೇಗ ಎಂಬ ಮಾತೇ ಇದೆ! ಹೀಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧನೋರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ರಾಗಿ ಹೊಸಳ್ಳಿಯಲ್ಲಿ ನಡೆದಿದೆ.
ಸಿದ್ದಾಪುರದ ರವೀಂದ್ರ ನಗರದ ಪುಂಡಲೀಕ ಶಾನುಭಾಗ್ (72) ಅಪಘಾತದಲ್ಲಿ ಮೃತಪಟ್ಟ ವೃದ್ದ. ಕಾರು ಚಾಲಕ ಮಂಜುನಾಥ ಭೀಮಪ್ಪ ನೀಲಿ (39), ಸಿದ್ದಾಪುರದ ಅಶ್ವಿನಿ ಶಾನುಭಾಗ್ (27) ಹಾಗೂ ನಾರಾಯಣ ಶಾನಭಾಗ್ (82) ಗಾಯಾಳುಗಳಾಗಿದ್ದಾರೆ.