ಭಟ್ಕಳ:ಈ ಭಾಗದ ಬಹು ಜನರ ಬೇಡಿಕೆಯಾಗಿದ್ದ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಶಾಖೆಯನ್ನು ತೆರೆಯಲಾಗಿದ್ದು, ನಿಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಭಟ್ಕಳಕ್ಕೆ ಹೋಗುವ ಬದಲು ಅದರ ವ್ಯವಸ್ಥೆಯನ್ನು ಇಲ್ಲೇ ಕಲ್ಪಿಸಿಕೊಟ್ಟಿದ್ದೇವೆ ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ್ ಹೇಳಿದರು.
ಮುರ್ಡೇಶ್ವರದಲ್ಲೇ ಪ್ರಾಂಭವಾಯಿತು ನೂತನ ವಿದ್ಯುತ್ ಸರಬರಾಜು ಶಾಖೆ.. - Hubballi Power Supply Branch
ಮುರ್ಡೇಶ್ವರ ಭಾಗದ ಜನರ ಬಹುಬೇಡಿಕೆಯಾಗಿದ್ದ ನೂತನ ವಿದ್ಯುತ್ ಸರಬರಾಜು ಶಾಖೆ ಮುರ್ಡೇಶ್ವರದಲ್ಲಿ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮವನ್ನು ಭಟ್ಕಳ ಶಾಸಕ ಸುನೀಲ ನಾಯ್ಕ ಉದ್ಘಾಟಿಸಿ, ಇನ್ನು ನಿಮ್ಮ ಸಣ್ಣ, ಪುಟ್ಟ ಸಮಸ್ಯೆಗಳಿಗೆ ಭಟ್ಕಳಕ್ಕೆ ಹೋಗುವ ಪರಿಸ್ಥಿತಿ ಇಲ್ಲ ಎಂದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇದರ ಮುರ್ಡೇಶ್ವರದ ಹೊಸ ಶಾಖೆಯನ್ನು ದೀಪ ಬೆಳಗಿಸಿ, ಶಾಖೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಬಹು ಜನರ ಬೇಡಿಕೆಯಾಗಿದ್ದ ಈ ಶಾಖೆ ಕಾರಣಾಂತರಗಳಿಂದ ಕಾರ್ಯಾರಂಭ ವಿಳಂಭವಾಗಿತ್ತು. ಈ ಶಾಖೆಯಿಂದ ನಿಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲಿಕ್ಕೆ ಆಗುತ್ತದೆ. ಮುರ್ಡೇಶ್ವರದ ಆಸುಪಾಸಿನ ಬೈಲೂರು, ಉತ್ತರಕೊಪ್ಪ ಹಾಗೂ ಬಸ್ತಿಯಲ್ಲಿನ ಜನರಿಗೆ ವಿದ್ಯುತ್ ವ್ಯತ್ಯಯದ ಸಮಸ್ಯೆ ತೋರಿದಲ್ಲಿ 25 ಕಿ.ಮಿ. ದೂರ ಹೋಗಿ ಪರಿಹಾರ ಕಂಡುಕೊಳ್ಳಬೇಕಿತ್ತು. ಅಂತಹ ಸಮಸ್ಯೆ ಇನ್ನು ಮುಂದೆ ಇದೇ ಶಾಖೆಯಲ್ಲಿ ಪರಿಹರಿಸಿಕೊಳ್ಳಬಹುದು. ಸ್ವಲ್ಪ ದಿನದಲ್ಲೇ ಕರೆಂಟ್ ಬಿಲ್ ಪಾವತಿಸಲು ಭಟ್ಕಳಕ್ಕೆ ಹೋಗುವ ಬದಲು ಆ ವ್ಯವಸ್ಥೆಯನ್ನೂ ಈ ಶಾಖೆಯಲ್ಲೇ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದ ನಂತರ ಸೌಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕದ ದೃಢೀಕರಣ ಪತ್ರಗಳನ್ನು ನೀಡಲಾಯಿತು.