ಭಟ್ಕಳ(ಉತ್ತರ ಕನ್ನಡ): ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.
ಬಂಧಿತ ಆರೋಪಿ ಅಬ್ದುಲ್ ಹನಾನ್ ಮೊಹ್ಮದ ಜಾಫರ್ ಕಡದಾರಿ ಎಂದು ತಿಳಿದು ಬಂದಿದೆ. ಕಳೆದ ಆಗಸ್ಟ್ 20 ರಂದು ಅಜಾದ್ ನಗರದ 1 ಕ್ರಾಸ್ ಸಮೀಪ ಕೊಕ್ತಿ ನಗರದಲ್ಲಿ ಮಾರುತಿ ಗ್ರೇ ಬಣ್ಣದ ಕಾರಿನಲ್ಲಿ ಬಂದು ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಪೊಲೀಸರು ಗೋವಾದ ಕಲ್ಲಂಗೋಟ್ ಬೀಚ್ ಸಮೀಪ ಬಾಲಕನನ್ನು ಪತ್ತೆ ಹಚ್ಚಿ ಭಟ್ಕಳಕ್ಕೆ ವಾಪಸ್ ಕರೆ ತರಲಾಗಿತ್ತು.