ಕಾರವಾರ: 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಹಾಕದೆ ಇರುವುದಕ್ಕೆ ಸ್ಫೂರ್ತಿ ಸೇವಾ ಸಂಘಟನೆ ಮಹಿಳಾ ಸದಸ್ಯರು, ನಗರದ ಅರ್ಜುನ್ ಚಿತ್ರಮಂದಿರದ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಫೂರ್ತಿ ಸೇವಾ ಸಂಘಟನೆ ಮಹಿಳಾ ಸದಸ್ಯರು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಹಾಕದಿರುವುದನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದೆಲ್ಲೆಡೆ ಸಿನಿಮಾ ಕುರಿತು ಚರ್ಚೆ ನಡೆಯುತ್ತಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಹ ಮಾಡಲಾಗುತ್ತಿದೆ. ಆದರೆ ಕಾರವಾರದಲ್ಲಿ ಮಾತ್ರ ಮಾಡುತ್ತಿಲ್ಲ.