ಕರ್ನಾಟಕ

karnataka

ETV Bharat / state

ವಿವಿಧ ಕಾಮಗಾರಿಗಳಿಗೆ ನೂತನ ಸಚಿವರಿಂದ ಗುದ್ದಲಿ ಪೂಜೆ - new Minister for various works

ಶಿವರಾಮ ಹೆಬ್ಬಾರ್ ಅವರು ಸಚಿವರಾಗಿ (ಕಾರ್ಮಿಕ ಮತ್ತು ಸಕ್ಕರೆ ಖಾತೆ) ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರದ ಬನವಾಸಿಗೆ ಆಗಮಿಸಿ, ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

The inauguration from new Minister for various works
ನೂತನ ಸಚಿವರಿಂದ ಗುದ್ದಲಿ ಪೂಜೆ

By

Published : Feb 15, 2020, 9:45 PM IST

ಶಿರಸಿ: ಶಿವರಾಮ ಹೆಬ್ಬಾರ್ ಅವರು ಸಚಿವರಾಗಿ (ಕಾರ್ಮಿಕ ಮತ್ತು ಸಕ್ಕರೆ ಖಾತೆ) ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರದ ಬನವಾಸಿಗೆ ಆಗಮಿಸಿ, ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಸಚಿವರಿಂದ ಗುದ್ದಲಿ ಪೂಜೆ

ಬನವಾಸಿ ಭಾಗದ ನಾಲ್ಕು ಹಳ್ಳಿಗಳ ನೂತನ ಸಿಮೆಂಟ್ ರಸ್ತೆಗಳಿಗೆ ಸಚಿವ ಹೆಬ್ಬಾರ್ ಗುದ್ದಲಿ ಪೂಜೆ ನೆರವೇರಿಸಿದರು. ಒಟ್ಟು 3.10 ಕೋಟಿ ರೂ. ಯೋಜನೆ ಅನುಷ್ಠಾನಕ್ಕೆ ಬರಲಿದೆ. ಬನವಾಸಿಯ ಮೊಗಳ್ಳಿ ರಸ್ತೆಗೆ 50 ಲಕ್ಷ, ಭಾಶಿ ರಸ್ತೆಗೆ 50 ಲಕ್ಷ, ನರೂರು ರಸ್ತೆಗೆ 1.20 ಕೋಟಿ ಹಾಗೂ ತಿಗಣಿ ರಸ್ತೆಗೆ 90 ಲಕ್ಷ ರೂ. ಬಿಡುಗಡೆಯಾಗಿದೆ.

ABOUT THE AUTHOR

...view details