ಕರ್ನಾಟಕ

karnataka

ETV Bharat / state

ಹಿಂದುತ್ವ ಕಾರ್ಡ್​ ಪ್ಲೇ ಮಾಡಿದ ಕಾಂಗ್ರೆಸ್​... ಮಂದಿರ ನಿರ್ಮಾಣ ಆಗ್ಲೇಬೇಕಂದ್ರು ದೇಶಪಾಂಡೆ - undefined

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆ ಮತ್ತು ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಡುವೆ ನೇರ ಹಣಾಹಣಿ ಇದೆ. ಆದ್ರೆ ಹಿಂದುತ್ವದ ಫೈರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಅವರನ್ನು ಮಣಿಸೋದು ಸುಲಭ ಅಲ್ಲ. ಇದನ್ನರಿತ ಕಾಂಗ್ರೆಸ್ ಹಾಗೂ ಜೆಡಿಎಸ್ ಅದೇ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್ ಸಭೆ

By

Published : Apr 17, 2019, 10:22 PM IST

ಶಿರಸಿ: ಹಿಂದುಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್​ ತಾನೂ ಕೂಡ ರಾಮಮಂದಿರ ಟ್ರಂಪ್​ ಕಾರ್ಡ್​ ಪ್ಲೇ ಮಾಡಲು ಮುಂದಾಗಿದೆ. ಶಿರಸಿಯಲ್ಲಿ ನಡೆದ ಕಾಂಗ್ರೆಸ್​ ಸಭೆಯಲ್ಲಿ ಮಾತನಾಡಿದಕಾಂಗ್ರೆಸ್ ಧುರಿಣ ಆರ್.ವಿ. ದೇಶಪಾಂಡೆ ರಾಮಮಂದಿರ ಆಗಲೇ ಬೇಕು. ರಾಮನ ವಿಗ್ರಹ ಇನ್ನೂ ಅಲ್ಲೇ ಇದೆ. ಮಂದಿರ ಆಗಲೇಬೇಕು. ಅಲ್ಪಸಂಖ್ಯಾತರೂ ಹಲವರು ರಾಮನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.

ಕಾಂಗ್ರೆಸ್ ಸಭೆ

ಇದಲ್ಲದೇ ಮೈತ್ರಿ ಅಭ್ಯರ್ಥಿ ಎಲ್ಲ ಕಡೆ ನಾವೂ ಹಿಂದುಗಳೇ, ಅನಂತಕುಮಾರ್ ಡೋಂಗಿ ಹಿಂದು ಎಂದು ಆರೋಪಿಸ್ತಿದಾರೆ. ಟೆಂಪಲ್ ರನ್ ನಡೆಸಿದ್ದು, ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕೇಸರಿ ಶಾಲು ಹಾಕಿ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಅಸ್ನೋಟಿಕರ್ ಹಿಂದುಗಳ ಮನಸೆಳೆಯಲು ಮುಂದಾಗಿರೋದು ಎಲ್ಲರ ಗಮನ ಸೆಳೆದಿದೆ.

ಒಟ್ಟಿನಲ್ಲಿ ಚುನಾವಣೆ ಸನೀಹಿಸುತ್ತಿದ್ದಂತೆ ಕಾಂಗ್ರೆಸ್ ಗೆಲುವಿಗಾಗಿ ತನ್ನ ಸಿದ್ಧಾಂತವನ್ನೇ ಬದಲಿಸಿಕೊಂಡಂತೆ ಕಾಣುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಂತಿಮವಾಗಿ ಜನ ಯಾರನ್ನು ಕೈ ಹಿಡಿತಾತೆ ಎಂದು ಕಾದುನೋಡಬೇಕಾಗಿದೆ.

For All Latest Updates

TAGGED:

ABOUT THE AUTHOR

...view details