ಶಿರಸಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದ ವಿಧಾನಸಭೆ ಅಲಗಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎನ್ನುವ ಭವಿಷ್ಯ ನುಡಿದಿದ್ದಾರೆ.
ಲೋಕ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಅಲುಗಾಡಲಿದೆ: ಅನಂತಕುಮಾರ್ ಹೆಗಡೆ - undefined
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಬೀಳುವ ಸಾಧ್ಯತೆ ಇದೆ. ಭವಿಷ್ಯ ನುಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ರಾಜ್ಯ ವಿಧಾನಸಭೆ ಅಲುಗಾಟ ಪ್ರಾರಂಭವಾಗಿದೆ: ಅನಂತಕುಮಾರ್ ಹೆಗಡೆ
ಶಿರಸಿಯಲ್ಲಿ ಅವಲೋಕನಾ ಸಭೆ ನಡೆಸಿ ಕಾರ್ಯಕರ್ತರನ್ನುದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ವಿಧಾನಸಭೆ ಅಲುಗಾಡುತ್ತಿದೆ. ಇಲ್ಲಿಂದಲೇ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣೆ ಮುಗಿಯಿತು ಎಂದು ನಾವು ಸುಮ್ಮನೆ ಕುಳಿತುಕೊಳ್ಳಬಾರದು. ರೆಸ್ಟ್ ಮಾಡದೇ ಕೆಲಸ ಮಾಡಬೇಕು ಎಂದರು.
ನಮ್ಮ ಅದೃಷ್ಟವೋ, ಅವರ ದುರಾದೃಷ್ಟವೋ ಕಾಂಗ್ರೆಸ್ ಈ ಬಾರಿ ಸ್ಪರ್ಧೆ ಮಾಡಲಿಲ್ಲ. ಸುಲಭವಾಗಿ ನಾವು ಚುನಾವಣೆ ಮಾಡಿದ್ದೇವೆ ಎಂದು ಅಂದುಕೊಂಡಿದ್ದೇವೆ. ಆದರೆ ಒಳಾಂತರ ನಮಗೆ ಮಾತ್ರ ಗೊತ್ತು. ಆದ್ದರಿಂದ ಎಲ್ಲಾ ಕಾರ್ಯಕರ್ತರು ಯಾವಾಗಲೂ ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.