ಕರ್ನಾಟಕ

karnataka

ETV Bharat / state

ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಿಗೇ ಪ್ರೂವ್​ ಆಗಿದೆ : ಶಿವರಾಜ್​ ಕುಮಾರ್

ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಪ್ 2 ನಿಂದ ಅದು ಪ್ರೂವ್​ ಆಗಿದೆ. ಯಾರು ಏನ್​ ಹೇಳಿದರೂ ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ ಎಂದು ಶಿವರಾಜ್​ ಕುಮಾರ್​ ಹೇಳಿದರು.

ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಿಗೇ ಪ್ರೂವ್​ ಆಗಿದೆ ಎಂದ  ಶಿವರಾಜಕುಮಾರ್
ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಿಗೇ ಪ್ರೂವ್​ ಆಗಿದೆ ಎಂದ ಶಿವರಾಜಕುಮಾರ್

By

Published : May 26, 2022, 9:29 PM IST

Updated : May 26, 2022, 9:50 PM IST

ಶಿರಸಿ: ಯಾರೋ ಏನೋ ಹೇಳಿದರು ಅಂತಾ ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಪ್ರೂವ್​ ಆಗಿದೆ ಎಂದು ಶಿವರಾಜ್​ ಕುಮಾರ್ ಹೇಳಿದ್ದಾರೆ. ತೆಲಗು ನಿರ್ದೇಶಕ ಗೀತಕೃಷ್ಣ ಸ್ಯಾಂಡಲ್ ವುಡ್ ಇಂಡಸ್ಟ್ರೀ ಡರ್ಟಿ ಎಂಬ ಹೇಳಿಕೆಗೆ ಶಿವಣ್ಣ ಈ ರೀತಿ ಹೇಳುವ ಮೂಲಕ ತಿರುಗೇಟು ನೀಡಿದರು.

ಶಿರಸಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ.ಕೆಜಿಎಪ್ 2 ನಿಂದ ಅದು ಪ್ರೂವ್​ ಆಗಿದೆ. ಯಾರು ಏನ್​ ಹೇಳಿದ್ರು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ. ಇಂತವರ ಬಗ್ಗೆ ರಿಯಾಕ್ಟ್ ಮಾಡಿದಷ್ಟು ಅವರಿಗೆ ಬೆನಿಫಿಟ್ ಜಾಸ್ತಿ ಆಗುತ್ತೆ. ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು ಎಂದರು.

ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಿಗೇ ಪ್ರೂವ್​ ಆಗಿದೆ : ಶಿವರಾಜ್​ ಕುಮಾರ್

ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲಾ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತಹವರ ಕೀಳು ಮಾತಿಗೆ ಕಿವಿ ಕೊಡದೇ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದ ಅವರು, ನನ್ನ ಮುಂದಿನ ಸಿನಿಮಾ ಬೈರಾಗಿ, ಯಾವುದೇ ಪ್ಯಾನ್ ಇಂಡಿಯಾ ಇಲ್ಲ. ಭಾವನೆಗಳ ಕಥೆ ಇದು, ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥ ಇದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಇದನ್ನೂ ಓದಿ: ಮನೆಗೆ ಹೋಗಿ ಅಡುಗೆ ಕಲಿತುಕೊಳ್ಳಿ.. ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಬಿಜೆಪಿ ವೈಯಕ್ತಿಕ ನಿಂದನೆ

Last Updated : May 26, 2022, 9:50 PM IST

For All Latest Updates

ABOUT THE AUTHOR

...view details