ಕಾರವಾರ:50 ವರ್ಷದ ಬಳಿಕ ಬರುವ ಕಣ್ಣಿನ ಪೊರೆ 11 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಆದರೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಬಾಲಕನ ಆತಂಕ ದೂರಮಾಡಿದ್ದಾರೆ.
11ರ ಬಾಲಕನಿಗೆ ಕಣ್ಣಿನ ಪೊರೆ ಯಶಸ್ವಿ ಶಸ್ತ್ರಚಿಕಿತ್ಸೆ! - 11 ವರ್ಷದ ಬಾಲಕನಿಗೆ ಕಣ್ಣಿನ ಪೊರೆ
ಪೊರೆ ಬೆಳೆದಿದ್ದರಿಂದ ಕಣ್ಣು ಕಳೆದುಕೊಳ್ಳುವ ಆತಂಕದಲ್ಲಿದ್ದ ಬಾಲಕನಿಗೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
![11ರ ಬಾಲಕನಿಗೆ ಕಣ್ಣಿನ ಪೊರೆ ಯಶಸ್ವಿ ಶಸ್ತ್ರಚಿಕಿತ್ಸೆ! Cataract surgery for the 11 year boy,ಶಸ್ತ್ರಚಿಕಿತ್ಸೆ ಮೂಲಕ ಕಣ್ಣಿನ ಪೊರೆ ತೆಗೆದ ವೈದ್ಯರು](https://etvbharatimages.akamaized.net/etvbharat/prod-images/768-512-5219252-thumbnail-3x2-brm.jpg)
ಅಂಕೋಲಾದ 11 ವರ್ಷದ ಬಾಲಕನ ಕಣ್ಣು ಕೆಲ ದಿನಗಳಿಂದ ಮಂಜು ಮಂಜಾಗಿ ಕಾಣತೊಡಗಿತ್ತು. ಬಳಿಕ ಕಾರವಾರದ ಖಾಸಗಿ ಆಸ್ಪತ್ರೆ ಕಣ್ಣಿನ ವೈದ್ಯರಾದ ಡಾ.ಕೌಶಿಕ್ ಹೆಗಡೆ ಅವರ ಬಳಿ ತೋರಿಸಿದಾಗ ಎರಡು ಕಣ್ಣಿಗೆ ಪೊರೆ ಬಂದಿರುವ ವಿಷಯ ತಿಳಿಸಿದ್ದರು. ಸಾಮಾನ್ಯವಾಗಿ ಪ್ರತಿ ಸಾವಿರದಲ್ಲಿ ಒಬ್ಬರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿರುವ ಬಗ್ಗೆಯೂ ತಿಳಿಸಿದ್ದರು.
ಡಾ.ಕೌಶಿಕ್ ಹೆಗಡೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಪೊರೆಯನ್ನು ತೆಗೆಯುವಲ್ಲಿ ಯಶಸ್ಸು ಕಂಡಿದ್ದಾರೆ. ತಾಯಿ ಗರ್ಭವತಿಯಾಗಿದ್ದಾಗ ಗರ್ಭದಲ್ಲಿ ತೊಂದರೆ ಕಾಣಿಸಿಕೊಂಡಾಗ ಮಗುವಿಗೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಲ್ಲದೇ ಅಲರ್ಜಿಯಿಂದ ಹಾಗೂ ನರದ ತೊಂದರೆಯಿಂದ ಈ ದೋಷ ಕಂಡುಬರುತ್ತವೆ. ತಕ್ಷಣದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮಕ್ಕಳು ಕಣ್ಣು ಕಳೆದುಕೊಳ್ಳವ ಸಾಧ್ಯತೆ ಇದ್ದು, ಅಪರೂಪದಲ್ಲಿ ಅಪರೂಪವಾದ ಘಟನೆ ಎನ್ನುವುದು ಚಿಕಿತ್ಸೆ ನೀಡಿದ ವೈದ್ಯ ಡಾ.ಕೌಶಿಕ್ ಹೆಗಡೆ ಮಾತು.