ಕಾರವಾರ:ಸ್ವಾತಂತ್ರ್ಯ ಚಳುವಳಿಗೆ ಜಿಲ್ಲೆ ನೀಡಿದ್ದ ಕೊಡುಗೆಯನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ "ದಂಡಿ" ಬೆಳ್ಳಿತೆರೆ ಬರಲು ಸಿದ್ಧವಾಗುತ್ತಿದೆ.
ಉಪ್ಪಿನ ಸತ್ಯಾಗ್ರಹದಂತಹ ಚಳುವಳಿ ವೇಳೆ ಮಹಾತ್ಮ ಗಾಂಧೀಜಿಯೊಂದಿಗೆ ಹೋರಾಟಕ್ಕೆ ಧುಮುಕಿದ್ದ ಇಲ್ಲಿನ ಅದೆಷ್ಟೋ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದೀಗ ಸ್ವಾತಂತ್ರ್ಯ ಸಂಗ್ರಾಮ ದಂಡಿ ರೂಪದಲ್ಲಿ ಬೆಳ್ಳಿತೆರೆಯಲ್ಲಿ ಮೂಡಿಬರಲಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದೆ.
ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ದಂಡಿ ಚಿತ್ರತಂಡದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಚಿತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉತ್ತರ ಕನ್ನಡದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟದ ಕಥಾ ಹಂದರವನ್ನ ಹೊಂದಿದೆ. ಅದರಲ್ಲೂ ವಿಶೇಷವಾಗಿ ಅಹಿಂಸಾ ಮಾರ್ಗದ ಹೋರಾಟ ಎನಿಸಿಕೊಂಡಿದ್ದ ಉಪ್ಪಿನ ಸತ್ಯಾಗ್ರಹ ಸಂದರ್ಭದ ಚಿತ್ರಣವನ್ನು ದಂಡಿ ಕಟ್ಟಿಕೊಡಲಿದ್ದು, ವಿನೂತನವಾಗಿ ತೆರೆಯ ಮೇಲೆ ಮೂಡಿಬರುವ ನಿರೀಕ್ಷೆ ಇದೆ ಎಂದು ನಟಿ ತಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.