ಭಟ್ಕಳ :ತಾಲೂಕಿನಲ್ಲಿ ಎಲ್ಲಿ ನೋಡಿದ್ರೂ ಕೊರೊನಾ ವೈರಸ್ ಬಗ್ಗೆ ಮಾತುಕತೆ, ಚರ್ಚೆ ಜೋರಾಗಿದೆ. ಈ ನಡುವೆ ಮುಂಜಾನೆ 5 ಗಂಟೆ ಹಾಗೂ 9 ಗಂಟೆ ಸುಮಾರಿಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ.
ಭಟ್ಕಳಕ್ಕೆ ತಂಪೆರೆದ ಮಳೆರಾಯ: ಜನರಲ್ಲಿ ಕೊರೊನಾ ವೈರಸ್ ಭಯ - ಮಹಾಮಾರಿ ಕೊರೊನಾ ವೈರಸ್ ಆತಂಕಕ್ಕೆ ಕಾರಣ
ಭಟ್ಕಳದಲ್ಲಿ ಮಳೆರಾಯ ತಂಪೆರೆದಿದ್ದು ಬಿಸಿಲಿನ ಝಳದಿಂದ ಜನರು ಕೊಂಚ ನಿರಾಳರಾದ್ರು. ಆದ್ರೆ ಜನರಲ್ಲಿ ಕೊರೊನಾ ವೈರಸ್ ಭಯ ಮಾತ್ರ ಹಾಗೆಯೇ ಉಳಿದಿದೆ.
ಕೊರೊನಾ ವೈರಸ್ ಆತಂಕದ ನಡುವೆ ಭಟ್ಕಳದಲ್ಲಿ ತಂಪೆರೆದ ಮಳೆರಾಯ
ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಭಾಗದಲ್ಲಿ ಮಳೆ ಸುರಿಯುವುದು ಕಡಿಮೆ. ಆದರೆ ಮಾರ್ಚ್ ಮೊದಲ ವಾರದಲ್ಲೇ ಮಳೆಯಾಗಿರುವುದು ತಾಲೂಕಿನ ವಾತಾವರಣವನ್ನು ತಂಪಗಾಗಿಸಿದೆ.
ಕೊರೊನಾ ವೈರಸ್ ತಂಪಗಿನ ಪ್ರದೇಶದಲ್ಲಿ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಮಳೆ ಜನರಲ್ಲಿ ಆತಂಕವನ್ನೂ ಹೆಚ್ಚಿಸಿದೆ.