ETV Bharat Karnataka

ಕರ್ನಾಟಕ

karnataka

ETV Bharat / state

ಬಾಣಂತಿ ಸಾವು ಪ್ರಕರಣದಲ್ಲಿ ವೈದ್ಯ ನಿರ್ದೋಷಿ: ಮರುನೇಮಕ ಮಾಡುವಂತೆ ಆದೇಶಿಸಿದ ಸರ್ಕಾರ - Medical Superintendent Dr. Shivananda Kudatharakar

ಸೆಪ್ಟೆಂಬರ್ 3ರಂದು ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬಳು ಶಸ್ತ್ರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಳು. ಈ ಸಂಬಂಧ ವೈದ್ಯ ಕುಡ್ತರಕರ್ ವಿರುದ್ದ ದೂರು ದಾಖಲಾಗಿತ್ತು. ತನಿಖಾ ತಂಡ ಬಾಣಂತಿ ಸಾವಿನ ಪ್ರಕರಣದಲ್ಲಿ ಕುಡ್ತರಕರ್ ನಿರ್ದೋಷಿ ಎಂದು ವರದಿ ನೀಡಿದ್ದರ ಬೆನ್ನಲ್ಲೇ ಅವರನ್ನು ಸರ್ಕಾರ ಮರು ನೇಮಕ ಮಾಡುವಂತೆ ಆದೇಶ ಮಾಡಿದೆ.

ಡಾ.ಶಿವಾನಂದ ಕುಡ್ತರಕರ್
ಡಾ.ಶಿವಾನಂದ ಕುಡ್ತರಕರ್
author img

By

Published : Dec 17, 2020, 5:30 PM IST

ಕಾರವಾರ:ವೈದ್ಯನನಿರ್ಲಕ್ಷ್ಯದಿಂದಬಾಣಂತಿ ಮಹಿಳೆ ಮೃತಪಟ್ಟಿರುವ ಆರೋಪದಡಿ ತನ್ನ ಹುದ್ದೆ ಕಳೆದು ಕೊಂಡಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಅವರನ್ನು ಬುಧವಾರ ಸರ್ಕಾರ ಮರು ನೇಮಕ ಮಾಡಿದೆ.

ಸೆಪ್ಟೆಂಬರ್ 3ರಂದು ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಗೀತಾ ಬಾನಾವಳಿ ಎಂಬಾಕೆ ಶಸ್ತ್ರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಳು. ಡಾ.ಕುಡ್ತರಕರ್ ನಿರ್ಲಕ್ಷದಿಂದಲೇ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ವಿಷಯ ಸರ್ಕಾರದ ಗಮನಕ್ಕೂ ಹೋದ ಕಾರಣ ಜಿಲ್ಲಾಡಳಿತಕ್ಕೆ ಘಟನೆ ಸಂಬಂಧ ತನಿಖೆ ನಡೆಸಲು ಸರ್ಕಾರ ಸೂಚಿಸಿದ ಹಿನ್ನೆಲೆ ತನಿಖಾ ತಂಡವನ್ನು ನೇಮಿಸಲಾಗಿತ್ತು. ಸರ್ಕಾರ ಕುಡ್ತರಕರ್ ಅವರನ್ನು ವರ್ಗಾವಣೆ ಮಾಡಿ ಅವರ ಹುದ್ದೆಗೆ ಸ್ಥಾನಿಕ ವೈದ್ಯಕೀಯ ಅಧಿಕಾರಿಯಾಗಿದ್ದ (ಆರ್‌ಎಂಒ) ಡಾ.ವೆಂಕಟೇಶ್ ಅವರನ್ನು ನೇಮಿಸಲಾಗಿತ್ತು. ತನ್ನ ತಪ್ಪಿಲ್ಲದಿದ್ದರೂ ವರ್ಗಾವಣೆ ಮಾಡಲಾಗಿದೆ ಎಂದು ಕುಡ್ತರಕರ್ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ (ಕೆಎಟಿ) ಮೊರೆ ಹೋಗಿದ್ದರು.

ಸರ್ಜನ್ ಮರು ನೇಮಕ ವಿರೋಧಿಸಿ ಬೃಹತ್ ಪ್ರತಿಭಟನೆ

ಕೆಎಟಿಯಲ್ಲಿ ಸರ್ಕಾರದ ವರ್ಗಾವಣೆ ಆದೇಶದ ವಿಚಾರಣೆ ನಡೆದಿದೆ. ಇತ್ತೀಚಿಗೆ ತನಿಖಾ ತಂಡ ಬಾಣಂತಿ ಸಾವಿನ ಪ್ರಕರಣದಲ್ಲಿ ಕುಡ್ತರಕರ್ ನಿರ್ದೋಷಿ ಎಂದು ವರದಿ ನೀಡಿದ್ದರ ಬೆನ್ನಲ್ಲೇ ಸರ್ಕಾರ ಮರು ನೇಮಕ ಮಾಡುವಂತೆ ಆದೇಶ ಮಾಡಿದೆ.

ಸರ್ಜನ್ ಮರು ನೇಮಕ ವಿರೋಧಿಸಿ ಬೃಹತ್ ಪ್ರತಿಭಟನೆ

ಸರ್ಜನ್ ಶಿವಾನಂದ ಕುಡ್ತರಕರ್ ಆಸ್ಪತ್ರೆಗೆ ಮರಳಿದ್ದನ್ನು ವಿರೋಧಿಸಿ ಮೃತಪಟ್ಟ ಬಾಣಂತಿ ಮಹಿಳೆ ಕುಟುಂಬಸ್ಥರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು. ಸರ್ವೋದಯ ನಗರದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ್ದ ನೂರಾರು ಜನರು ಕುಡ್ತರಕರ್​ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.

ABOUT THE AUTHOR

...view details