ಕರ್ನಾಟಕ

karnataka

ETV Bharat / state

ಮಾರಿಕಾಂಬಾ ದೇವಸ್ಥಾನದ ಯಾವ ಸಿಬ್ಬಂದಿಗೂ ಕೊರೊನಾ‌ ಇಲ್ಲ: ಆಡಳಿತ ಮಂಡಳಿ ಸ್ಪಷ್ಟನೆ - latest sirsi news

ಕಳೆದ ವಾರ ಮಾರಿಕಾಂಬಾ ದೇವಸ್ಥಾನದ ಸಮೀಪದಲ್ಲಿರುವ, ಭಕ್ತನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ದೇವಸ್ಥಾನವನ್ನು ಸೀಲ್​​ಡೌನ್ ಮಾಡಿ, ಸಿಬ್ಬಂದಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುರವಾರ ಅದರ ವರದಿ ಬಂದಿದ್ದು, ಎಲ್ಲರ ರಿಪೋರ್ಟ್​​ ನೆಗೆಟಿವ್ ಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ.

temple administration
ಆಡಳಿತ ಮಂಡಳಿ ಸ್ಪಷ್ಟನೆ

By

Published : Jul 11, 2020, 9:53 AM IST

ಶಿರಸಿ :ರಾಜ್ಯದಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗಿದ್ದು, ಇಂತಹ ಸುಳ್ಳನ್ನು ಭಕ್ತರು ನಂಬಬಾರದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

ಕಳೆದ ವಾರ ಮಾರಿಕಾಂಬಾ ದೇವಸ್ಥಾನದ ಸಮೀಪದಲ್ಲಿರುವ, ಭಕ್ತರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ದೇವಸ್ಥಾನವನ್ನು ಸೀಲ್​​ಡೌನ್ ಮಾಡಿ, ಸಿಬ್ಬಂದಿಗಳ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುರವಾರ ಅದರ ವರದಿ ಬಂದಿದ್ದು, ಎಲ್ಲರಿಗೂ ನೆಗೆಟಿವ್ ರಿಪೋರ್ಟ್​​ ಬಂದಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಆಡಳಿತ ಮಂಡಳಿ ಸ್ಪಷ್ಟನೆ

ಕೊರೊನಾ ನೆಗೆಟಿವ್ ಬಂದಿದ್ದರೂ ಸಿಬ್ಬಂದಿಗೆ ಪಾಸಿಟಿವ್ ಪತ್ತೆಯಾಗಿದೆ ಎಂದು ಕೆಲ ವೆಬ್​ಸೈಟ್​​ಗಳು ಸೇರಿದಂತೆ ಸುಳ್ಳು ಸುದ್ದಿ ಬಿತ್ತರಿಸಲಾಗಿತ್ತು. ಇದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ದೇವಸ್ಥಾನದಲ್ಲಿ ಅತ್ಯಂತ ಸುರಕ್ಷತೆಯನ್ನು ಕೈಗೊಳ್ಳಲಾಗಿದೆ. ಭೇಟಿ ನೀಡುವ ಪ್ರತಿಯೊಬ್ಬ ಭಕ್ತರನ್ನು ತಪಾಸಣೆ ನಡೆಸಿಯೇ ಪ್ರವೇಶ ನೀಡಲಾಗಿದೆ. ಹಾಗೂ ನಮ್ಮ ಸಿಬ್ಬಂದಿ ಆರೋಗ್ಯ ತಪಾಸಣೆ ಸಹ ಮಾಡಲಾಗಿದೆ. ಇದೀಗ ಅವರೆಲ್ಲರ ವರದಿ ನೆಗೆಟಿವ್​ ಬಂದಿದೆ ಎಂದು ದೃಢಪಡಿಸಿದೆ.

ABOUT THE AUTHOR

...view details