ಕರ್ನಾಟಕ

karnataka

ETV Bharat / state

ರೈತರ ಪ್ರತಿಭಟನೆಗೆ ಸಾಥ್​; ದೆಹಲಿ ಪಾದಯಾತ್ರೆ ಹೊರಟ ಟೆಕ್ಕಿ - ರೈತರ ಪ್ರತಿಭಟನೆಗೆ ಸಾಥ್​ ನೀಡಲು ಟೆಕ್ಕಿ ಪಾದಯಾತ್ರೆ

ನಿತ್ಯ 40 ಕಿ.ಮೀ ನಡೆದುಕೊಂಡೇ ಸಾಗುವ ಅವರು ಈಗಾಗಲೇ 2,500 ಕಿ.ಮೀ. ಕ್ರಮಿಸಿದ್ದು, ಇದೀಗ ಉಡುಪಿ ಮೂಲಕ ಕಾರವಾರ ತಲುಪಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಅನ್ನೋದು ಅವರ ಒತ್ತಾಯ.

Techy support for Delhi Farmers Protest
ರೈತರ ಪ್ರತಿಭಟನೆಗೆ ಸಾಥ್​ ನೀಡಲು ಟೆಕ್ಕಿ ಪಾದಯಾತ್ರೆ

By

Published : Jul 19, 2021, 10:46 PM IST

ಕಾರವಾರ:ಕಳೆದ ಒಂದು ವರ್ಷದಿಂದ ರೈತರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಟೆಕ್ಕಿಯೋರ್ವರು ಬೆಂಬಲ ಸೂಚಿಸಿದ್ದಾರೆ‌. ಮಳೆ-ಗಾಳಿಯನ್ನು ಲೆಕ್ಕಿಸದೇ ಸುಮಾರು 6 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಪಾದಯಾತ್ರೆ ಮೂಲಕವೇ ದೆಹಲಿ ರೈತರ ಹೋರಾಟಕ್ಕೆ ಸಾಥ್​​ ನೀಡಲು ಮುಂದಾಗಿದ್ದಾರೆ.

ರೈತರ ಪ್ರತಿಭಟನೆಗೆ ಸಾಥ್​ ನೀಡಲು ಟೆಕ್ಕಿ ಪಾದಯಾತ್ರೆ

ಖಾಸಗಿ ಕಂಪನಿಯೊಂದರಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ನಾಗರಾಜ ಕಲ್ಗುಟ್ಕರ್ ಎಂಬುವವರು ದೆಹಲಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಫೆ.11ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಆರಂಭಿಸಿರುವ ಅವರು ಏ.23ಕ್ಕೆ ಚಿತ್ರದುರ್ಗ ತಲುಪಿದ್ದರು.

ಕೊರೊನಾ ಕಾರಣದಿಂದ ಜುಲೈ 3 ರವರೆಗೆ ಅಲ್ಲೇ ವಾಸ್ತವ್ಯ ಹೂಡಿದ್ದ ಅವರು ತದನಂತರ ಮತ್ತೆ ಪಾದಯಾತ್ರೆ ಆರಂಭಿಸಿ ಕಾರವಾರ ಪ್ರವೇಶಿಸಿ ಇದೀಗ ಬೆಳಗಾವಿ ಮೂಲಕ ದೆಹಲಿ ಕಡೆ ಪ್ರಯಾಣ ಬೆಳೆಸಿದ್ದಾರೆ. ನಿತ್ಯ 40 ಕಿ.ಮೀ ನಡೆದುಕೊಂಡೆ ಸಾಗುವ ಅವರು ಈಗಾಗಲೇ 2500 ಕಿ.ಮೀ. ಕ್ರಮಿಸಿದ್ದು, ಇದೀಗ ಉಡುಪಿ ಮೂಲಕ ಕಾರವಾರ ತಲುಪಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು.

ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೊಳಿಸಬೇಕು. ರೈತರ ಮೇಲೆ ಸರ್ವಾಧಿಕಾರಿ ಧೋರಣೆಯಿಂದ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಸರ್ವಾಧಿಕಾರಿ ಧೋರಣೆಯನ್ನು ಜನತೆ ಸಹ ಖಂಡಿಸಬೇಕು. ರೈತರು ಕೈಗೊಂಡಿರುವ ನ್ಯಾಯಯುತ ಹೋರಾಟಕ್ಕೆ ಬೆಂಬಲಿಸಿ ಹೋರಾಟದಲ್ಲಿ ನನ್ನದೂ ಒಂದು ಪಾಲಿರಲಿ ಎಂಬ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಎಂ.ಟೆಕ್ ಪದವೀಧರರಾಗಿರುವ ನಾಗರಾಜ, ಖಾಸಗಿ ಕಂಪನಿಯಲ್ಲಿ ಕೈತುಂಬ ವೇತನ ಪಡೆಯುವ ನೌಕರಿಯಲ್ಲಿದ್ದರು. ಹಲವು ವರ್ಷ ವಿದೇಶದಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು. 2015ರ ಬಳಿಕ ಭ್ರಷ್ಟಾಚಾರ ವಿರೋಧಿ ಹೋರಾಟ ಸೇರಿದಂತೆ ಇತರ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಅವರು ಇದೀಗ ಮಲೆಮಹದೇಶ್ವರ ಬೆಟ್ಟದಿಂದ ದೇಶದ ರಾಜಧಾನಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ಸಾಥ್‌ ನೀಡಿ ಪಾದಯಾತ್ರೆ ಕೈಗೊಂಡಿರುವ ಯುವಕನಿಗೆ ಕಾರವಾರದಲ್ಲಿ ಸ್ವಾಗತ ನೀಡಿದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details