ಕರ್ನಾಟಕ

karnataka

ETV Bharat / state

ವಿದ್ಯಾರ್ಥಿ ಮೇಲೆ ಶಿಕ್ಷಕನ ಮೃಗೀಯ ವರ್ತನೆ: ಬೋಧಕನಿಗೆ ಧರ್ಮದೇಟು-ವಿಡಿಯೋ - ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ವಿದ್ಯಾರ್ಥಿಮೇಲೆ ಹಲ್ಲೆ

ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಮೃಗೀಯವಾಗಿ ವರ್ತಿಸಿದ ಶಿಕ್ಷಕನೋರ್ವನಿಗೆ ಸಾರ್ವಜನಿಕರೇ ಸರಿಯಾಗೇ ಪಾಠ ಕಲಿಸಿದ್ದಾರೆ. ಅಲ್ಲದೇ, ಶಿಕ್ಷಣ ಇಲಾಖೆಯಿಂದಲೂ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಶಾಲೆಗೆ ಬಾರದ್ದಕ್ಕೆ ಶಿಕ್ಷಕನ ಮೃಗೀಯ ವರ್ತನೆ,  teacher assault on student at Karwar
ಶಾಲೆಗೆ ಬಾರದ್ದಕ್ಕೆ ಶಿಕ್ಷಕನ ಮೃಗೀಯ ವರ್ತನೆ

By

Published : Jan 20, 2020, 8:12 PM IST

Updated : Jan 20, 2020, 11:11 PM IST

ಕಾರವಾರ: ಶಾಲೆಗೆ ಬಾರದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಕೈ-ಕಾಲುಗಳನ್ನು ಕಟ್ಟಿ ಬಾಸುಂಡೆ ಮೂಡುವಂತೆ ಥಳಿಸಿರುವ ಘಟನೆ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ನಡೆದಿದೆ.

ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೋಸಯ್ಯ ರೆಡ್ಡಿ ಪೋಗು ಎಂಬಾತ ಜಾನು ಟಕ್ಕು ಗೌಳಿಯ ಎಂಬ 4ನೇ ತರಗತಿಯ ವಿದ್ಯಾರ್ಥಿ ಬಟ್ಟೆ ಬಿಚ್ಚಿ ಕೈ ಕಾಲುಗಳನ್ನು ಕಟ್ಟಿ ಬೆತ್ತದಿಂದ ಹೊಡೆದಿದ್ದಾರೆ. ಇದರಿಂದ ಬಾಲಕನ ಬೆನ್ನ ಮೇಲೆ ಬಾಸುಂಡೆಗಳು ಮೂಡಿವೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಾನು ಗೌಳಿಯ ಪೋಷಕರು ಹಾಗೂ ಸ್ಥಳೀಯರು ಶಾಲೆಗೆ ದೌಡಾಯಿಸಿ, ಶಿಕ್ಷಕನ ಮೃಗಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ವಿದ್ಯಾರ್ಥಿ ಮೇಲೆ ಶಿಕ್ಷಕನ ಮೃಗೀಯ ವರ್ತನೆ

ಶಿಕ್ಷಕನಿಗೆ‌ ಗೂಸಾ:
ಅಮಾನವೀಯವಾಗಿ ವರ್ತಿಸಿದ ಎಂದು ಆಕ್ರೋಶಗೊಂಡ ಸ್ಥಳೀಯರು, ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗೂಸಾ ನೀಡಿದ್ದಾರೆ. ಅಲ್ಲದೆ, ಜೊಯಿಡಾ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲು ಮಾಡಿದ್ದಾರೆ. ಇನ್ನು ಶಿಕ್ಷಕನ ಹಲ್ಲೆಯ ಬಗ್ಗೆ ತಿಳಿದ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

Last Updated : Jan 20, 2020, 11:11 PM IST

For All Latest Updates

ABOUT THE AUTHOR

...view details