ಕಾರವಾರ :ಕರಾವಳಿಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗುತ್ತಿದೆ. ಉತ್ತರ ಕನ್ನಡ ಭಾಗದ ಕಡಲಿನಲ್ಲಿ ಅಲೆಗಳ ರೌದ್ರಾವತಾರಕ್ಕೆ ಜನ ಕಂಗಾಲಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಮಳೆ ಇಲ್ಲದೆ ಇದ್ದರೂ ಕೂಡ ಗಾಳಿ ಹಾಗೂ ಕರಾವಳಿ ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.

ಭಟ್ಕಳದ ಬಂದರು, ಮಾವಿನಕುರ್ವಾ, ಜಾಲಿಕೋಡಿ, ತೆಂಗಿನಗುಂಡಿ, ಕರಿಕಲ್, ಹೊನ್ನಾವರದ ಮಂಕಿ, ಅಂಕೋಲಾದ ಅವರ್ಸಾ, ಮುದಗಾ, ಬಿಳಿಹೊಯ್ಗೆ ಕುಮಟಾದ ವನ್ನಳ್ಳಿ, ಕಾರವಾರದ ಮಾಜಾಳಿ, ನಚ್ಕಿನ್ ಬಾಗ್ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಎಲ್ಲೆಡೆಯೂ ಕಡಲಕೊರೆತ ಉಂಟಾಗಿದೆ.
ಇನ್ನು, ಕೆಲ ಕಡಲತೀರದ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಿನಲ್ಲಿ ಆಳೆತ್ತರದ ಅಲೆಗಳನ್ನು ಕಂಡು ಮೀನುಗಾರರು ಸಹ ಕಂಗಾಲಾಗಿದ್ದು, ಸದ್ಯ ಬೋಟ್ ಬಲೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಅಲ್ಲದೆ, ಭಟ್ಕಳದಲ್ಲಿ ಅಲೆಗಳ ಅಬ್ಬರಕ್ಕೆ ತಡೆಗೋಡೆ ಸಹ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಸದ್ಯ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಧ್ಯಾಹ್ನದ ಬಳಿಕ ಗಾಳಿ ಮಳೆ ಜೋರಾಗುವ ಸಾಧ್ಯತೆ ಇದೆ.