ಕಾರವಾರ:ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಜಿಲ್ಲೆಯ 31 ಗ್ರಾಮಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದ್ದು, ಮೊದಲ ದಿನವೇ 92 ಮನೆಗಳಿಗೆ ಹಾನಿಯಾಗಿದೆ.
ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಕೃಷಿ, ತೋಟಗಾರಿಕೆ, ವಸತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಚಂಡಮಾರುತದಿಂದ ಇನ್ನಿಲ್ಲದ ಹಾನಿ ಸಂಭವಿಸಿದೆ. ಈ ಪೈಕಿ ಕಾರವಾರ ಹಾಗೂ ಕುಮಟಾದಲ್ಲಿ ತಲಾ 3 ಗ್ರಾಮಗಳಲ್ಲಿ, ಅಂಕೋಲಾ, ಹೊನ್ನಾವರದಲ್ಲಿ ತಲಾ 7, ಭಟ್ಕಳ 11 ಗ್ರಾಮಗಳಲ್ಲಿ ಹಾನಿಯಾಗಿದೆ. ಭಟ್ಕಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮನೆಗಳಿಗೆ ಹಾನಿಯಾದ ಪೈಕಿ ಪೂರ್ಣ ಪ್ರಮಾಣದಲ್ಲಿ ಅಂಕೋಲಾದಲ್ಲಿ ಒಂದು ಮನೆ, ತೀವ್ರಹಾನಿ ಅಂಕೋಲಾ ಹಾಗೂ ಹೊನ್ನಾವರದಲ್ಲಿ ತಲಾ 2, ಶಿರಸಿ 1. ಭಾಗಶಃ ಹಾನಿ ಪೈಕಿ ಕಾರವಾರ 7, ಅಂಕೋಲಾ 10, ಕುಮಟಾ 32, ಹೊನ್ನಾವರ 9, ಭಟ್ಕಳ 30 ಸೇರಿದಂತೆ ಒಟ್ಟು 92 ಮನೆಗಳಿಗೆ ಚಂಡಮಾರುತದ ಪರಿಣಾಮ ಉಂಟಾಗಿದೆ.