ಕಾರವಾರ: ಚಂಡಮಾರುತದ ಅಬ್ಬರದಿಂದಾಗಿ ಕಡಲ ತೀರದ ಮನೆಗಳಿಗೆ ಅಲೆಗಳು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ್ದ ಕುಮಟಾ-ಹೊನ್ನಾವರ ಭಾಗದ ಸುಮಾರು 30 ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ಆಶ್ರಯ ಕಲ್ಪಿಸಲಾಗಿದೆ.
ತೌಕ್ತೆಗೆ ತತ್ತರಿಸಿದ ಕರಾವಳಿಗರು: 30 ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ - ತೌಕ್ತೆ ಚಂಡಮಾರುತ
ಕರಾವಳಿಯಲ್ಲಿ ನಿನ್ನೆಯಿಂದ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ಭಾರೀ ಗಾಳಿ ಸಹಿತ ಮಳೆ ಮುಂದುವರೆದಿದೆ.
![ತೌಕ್ತೆಗೆ ತತ್ತರಿಸಿದ ಕರಾವಳಿಗರು: 30 ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಾಳಜಿ ಕೇಂದ್ರದಲ್ಲಿ ಆಶ್ರಯ](https://etvbharatimages.akamaized.net/etvbharat/prod-images/768-512-11776745-thumbnail-3x2-abc.jpg)
ಕಾಳಜಿ ಕೇಂದ್ರದಲ್ಲಿ ಆಶ್ರಯ
"ತೌಕ್ತೆ"ಗೆ ತತ್ತರಿಸಿದ ಕರಾವಳಿಗರು
ಹೊನ್ನಾವರದ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದ್ದ ಸಮುದ್ರ ತೀರದ 60 ಮಂದಿಗೆ ಪಾವಿನ ಕುರ್ವದಲ್ಲಿ ಆಶ್ರಯ ಕಲ್ಪಿಸಲಾಗಿದೆ. ನೀರು ನುಗ್ಗಿದ ಗ್ರಾಮಗಳಿಗೆ ಈಗಾಗಲೇ ತಹಶೀಲ್ದಾರ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ : ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್ಗಳು; 5 ಮಂದಿ ನಾಪತ್ತೆ