ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿದ ಶಾಸಕ ಸುನೀಲ್ ನಾಯ್ಕ - Taluka officials felicitated by MLA

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಕೊರೊನಾ ಸೋಂಕಿನಿಂದ ಮುಕ್ತವಾಗಿದ್ದು, ಇದಕ್ಕೆ ಶ್ರಮಿಸಿದ ಅಧಿಕಾರಿಗಳಿಗೆ, ವೈದ್ಯಕೀಯ ಅಧಿಕಾರಿಗಳಿಗೆ ಶಾಸಕ ಸುನೀಲ್ ನಾಯ್ಕ ಸನ್ಮಾನಿಸಿದರು.

Taluka officials felicitated by MLA
ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿದ ಶಾಸಕ ಸುನೀಲ್ ನಾಯ್ಕ

By

Published : May 2, 2020, 7:00 PM IST

Updated : May 2, 2020, 8:53 PM IST

ಭಟ್ಕಳ: ಕೊರೊನಾ ಸೋಂಕು ತಡೆಗೆ ಶ್ರಮಿಸುತ್ತಿರುವ ತಾಲೂಕಿನ ಅಧಿಕಾರಿಗಳಿಗೆ, ಪೊಲೀಸರಿಗೆ ಶಾಸಕ ಸುನೀಲ್​ ನಾಯ್ಕ ಶನಿವಾರ ಅವರ ಕಚೇರಿಗೆ ತೆರಳಿ ಸನ್ಮಾನಿಸಿದರು.

ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿದ ಶಾಸಕ ಸುನೀಲ್ ನಾಯ್ಕ

ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ 10 ಕೊರೊನಾ ಸೋಂಕಿತರು ದೃಢಪಟ್ಟಿದ್ದರು. ಆ ಎಲ್ಲ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಭಟ್ಕಳ ತಾಲೂಕು ಕೊರೊನಾ ಪ್ರಕರಣ ಮುಕ್ತವಾಗಿದೆ. ಇದರ ಹಿಂದೆ ತಾಲೂಕು ಆಡಳಿತದ ಅಧಿಕಾರಿಗಳು, ಪೊಲೀಸರ ಶ್ರಮವಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು

ಸಹಾಯಕ ಆಯುಕ್ತ ಭರತ್ ಎಸ್., ಡಿವೈಎಸ್​ಪಿ ಗೌತಮ್‌ ಕೆ.ಸಿ., ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ತಾಲೂಕು ವೈದ್ಯಾಧಿಕಾರಿ ಮೂರ್ತಿರಾಜ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನ ಮನೆ, ಅಗತ್ಯ ವಸ್ತುಗಳ ಪೂರೈಕೆ ವಿಭಾಗದ ನೋಡಲ್ ಅಧಿಕಾರಿ ಸಾಜಿದ್ ಮುಲ್ಲಾ ಅವರಿಗೂ ಗೌರವಿಸಿದರು.

Last Updated : May 2, 2020, 8:53 PM IST

ABOUT THE AUTHOR

...view details