ಕರ್ನಾಟಕ

karnataka

ETV Bharat / state

ಮತದಾನ ಜಾಗೃತಿ ಮೂಡಿಸಲು ಗೋಡೆಗಳ ಮೇಲೆ ಹಸೆ ಚಿತ್ರಗಳು.. - undefined

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್​ ಸಮಿತಿ ಮುಂದಾಗಿದ್ದು, ಗೋಡೆಗಳ ಮೇಲೆ ಹಸೆ ಚಿತ್ರ ಬಿಡಿಸುತ್ತಿದೆ.

ಹಸೆ ಚಿತ್ರ

By

Published : Apr 6, 2019, 8:42 PM IST

ಕಾರವಾರ:ಮತದಾನ ಪ್ರಮಾಣ ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಈಗ ಮತ್ತೊಂದು ವಿಭಿನ್ನ ಪ್ರಯತ್ನ ನಡೆಸುತ್ತಿದೆ.ಸರ್ಕಾರಿ ಕಚೇರಿಗಳ‌ ಖಾಲಿ ಗೋಡೆಗಳ ಮೇಲೆ ಹಸೆ ಚಿತ್ರಗಳನ್ನು ಮೂಡಿಸಿ ವಿಶಿಷ್ಟ ರೀತಿಯಲ್ಲಿ ಮತದಾರರನ್ನು ಮತದಾನ ಮಾಡಲು ಪ್ರೇರೆಸುತ್ತಿದೆ.

ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಟ್ಯಾಗೋರ್ ಚಿತ್ರಕಲಾ ಮಹಾವಿದ್ಯಾಲಯ ಸಹಯೋಗದೊಂದಿಗೆ ನಗರದಲ್ಲಿ ಮತದಾನದ ಕುರಿತು ಆಕರ್ಷಕ ವರ್ಲಿ ಪೇಟಿಂಗ್ ಮೂಡಿಸುತ್ತಿದೆ. ನಗರದ ಸರ್ಕಾರಿ ಕಚೇರಿಗಳ ಖಾಲಿ ಗೋಡೆಗಳನ್ನು ಬಳಸಿಕೊಂಡಿದ್ದು, ವಿಭಿನ್ನವಾಗಿ ಮತದಾರರ ಗಮನ ಸೆಳೆಯುತ್ತಿದೆ.

ಮತದಾನ ಜಾಗೃತಿಗಾಗಿ ಗೋಡೆಗಳ ಮೇಲೆ ಹಸೆ ಚಿತ್ರಗಳು..

ತಪ್ಪದೆ ಮತದಾನ ಮಾಡಿ, ಆಮಿಷಕ್ಕೆ ಒಳಗಾಗಿ ಮತದಾನ ಮಾಡಬೇಡಿ, ಇಂದಿನ ಮತ ಮುಂದಿನ ಹಿತ, ಹೆಂಡಕ್ಕೆ ನಿಮ್ಮ ಮತ ಮಾರಿಕೊಳ್ಳದಿರಿ ಎಂಬಿತ್ಯಾದಿ ಘೋಷ ವಾಕ್ಯಗಳನ್ನು ಗೋಡೆ ಮೇಲೆ ಬಿಡಿಸಲಾಗುತ್ತಿದೆ. ಸ್ವತಃ ವಿದ್ಯಾರ್ಥಿಗಳೇ ಬಿಡಿಸಿ ತಮ್ಮ ಕೈ ಚಳಕ ಪ್ರದರ್ಶಿಸುತ್ತಿದ್ದಾರೆ. ಗ್ರಾಮೀಣ ಕಲೆಯಾಗಿರುವ ಹಸೆ ಚಿತ್ರದ ಮೂಲಕ ಮತದಾರರನ್ನು ಆಕರ್ಷಿಸಲು ಮುಂದಾಗಿದೆ.

ಮತದಾರರು ಮತಗಟ್ಟೆಗೆ ತೆರಳುತ್ತಿರುವ ಚಿತ್ರ, ಮತದಾನ ಮಾಡುತ್ತಿರುವ ಚಿತ್ರ, ವಿವಿ ಪ್ಯಾಟ್ ಮಷಿನ್, ಮದ್ಯಕ್ಕೆ ಮತ ಮಾರಿಕೊಳ್ಳದಂತೆ ಮತ್ತು ಚುನಾವಣಾಧಿಕಾರಿಗಳು ಮತದಾನ ವ್ಯವಸ್ಥಿತವಾಗಿರಿಸಿದ ಚಿತ್ರಗಳನ್ನು ಬಿಡಿಸಲಾಗಿದೆ. ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಎದುರು, ಕೃಷಿ ಇಲಾಖೆ, ತಾಲೂಕು ಪಂಚಾಯತ್‌, ಹಳೆ ನಗರಸಭೆ ಆವರಣ ಗೋಡೆಗಳ ಮೇಲೆ‌ ಬಿಡಿಸಲಾಗುತ್ತಿದೆ. ಈ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

For All Latest Updates

TAGGED:

ABOUT THE AUTHOR

...view details