ಕರ್ನಾಟಕ

karnataka

ETV Bharat / state

ಸ್ವಚ್ಛ ಸರ್ವೇಕ್ಷಣೆ-2021: ಕುಮಟಾಕ್ಕೆ ಸ್ವಚ್ಛ ನಗರ ಗರಿಮೆ - ಕುಮಟಾಕ್ಕೆ ಸ್ವಚ್ಛ ನಗರ ಗರಿಮೆ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ 2021 (Swachh Survekshan) ಆರನೇ ಆವೃತ್ತಿಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕುಮಟಾ ಸೇರಿದಂತೆ ರಾಜ್ಯದ ಒಟ್ಟು 8 ನಗರಗಳಿಗೆ ಸ್ಥಾನ ನೀಡಲಾಗಿದೆ.

Clean City Award for Kumta
ಕುಮಟಾಕ್ಕೆ ಸ್ವಚ್ಛ ನಗರ ಗರಿಮೆ: ಪ್ರಶಸ್ತಿ ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ

By

Published : Nov 21, 2021, 7:53 AM IST

ಕಾರವಾರ:ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ 2021 (Swachh Survekshan) 6ನೇ ಆವೃತ್ತಿಯ ಸ್ವಚ್ಚ ನಗರ ಪ್ರಶಸ್ತಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣಕ್ಕೆ ಲಭಿಸಿದೆ.

ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕುಮಟಾಕ್ಕೆ ಸ್ವಚ್ಛ ನಗರ ಗರಿಮೆ: ಪ್ರಶಸ್ತಿ ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ

ದೇಶದಾದ್ಯಂತ 4,320 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 5 ಕೋಟಿಗೂ ಅಧಿಕ ಜನರು ಫೀಡ್‌ಬ್ಯಾಕ್ ನೀಡಿದ್ದಾರೆ. ಈ ಪೈಕಿ ಸ್ಟಾರ್ ರೇಟಿಂಗ್ ಪಡೆದ ನಗರಗಳಿಗೆ ಸ್ವಚ್ಛ ನಗರ ಪ್ರಶಸ್ತಿಗೆ ಸಚಿವಾಲಯ ಆಯ್ಕೆ ಮಾಡಿದೆ.

ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಕಸಮುಕ್ತ ನಗರ ಪ್ರಶಸ್ತಿ ದೊರೆತಿದೆ. ಹುಬ್ಬಳ್ಳಿ - ಧಾರವಾಡ, ಮೈಸೂರು, ಮುಧೋಳ, ಹೊಸದುರ್ಗ, ಕೃಷ್ಣರಾಜನಗರ, ಪಿರಿಯಾಪಟ್ಟಣಗಳನ್ನು ಸ್ವಚ್ಛ ನಗರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶನಿವಾರ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ:ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿ ಪ್ರದಾನ..ಮೈಸೂರಿಗೆ''5 ಸ್ಟಾರ್​ ರ‍್ಯಾಂಕಿಂಗ್ '' ಪಟ್ಟ

ABOUT THE AUTHOR

...view details