ಕರ್ನಾಟಕ

karnataka

ETV Bharat / state

ಭಟ್ಕಳದ ಪುರವರ್ಗದ ಯುವಕರಿಂದ ತಯಾರಾಯ್ತು 'ಮೋಜಿನ ಬಲೆ '​ ಕಿರುಚಿತ್ರ

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಪುರವರ್ಗದ ಯುವಕರು ಲಾಕ್​​ಡೌನ್​​ ಸಮಯದಲ್ಲಿ ಕಿರುಚಿತ್ರವೊಂದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. 'ಮೋಜಿನ ಬಲೆ ' ಎಂಬ ಕಿರುಚಿತ್ರ ಇದಾಗಿದ್ದು ಇದರಲ್ಲಿ ಯುವಕರು ಸಮಾಜಕ್ಕೆ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ.

Mojina bale
'ಮೋಜಿನ ಬಲೆ'

By

Published : Jun 6, 2020, 5:11 PM IST

ಭಟ್ಕಳ (ಉತ್ತರ ಕನ್ನಡ):ಯುವಜನತೆ ಈ ಲಾಕ್​​ಡೌನ್​​ ದಿನಗಳಲ್ಲಿ ಸುಮ್ಮನೆ ಕೂರದೆ ಸದುಪಯೋಗಪಡಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಇರುವ ಕೆಲವರು ಕೊರೊನಾ ಜಾಗೃತಿ ಗೀತೆ, ಕಿರುಚಿತ್ರಗಳನ್ನು ತಯಾರಿಸಿ ಯೂಟ್ಯೂಬ್​​​ನಲ್ಲಿ ಅಪ್​ಲೋಡ್​​ ಮಾಡುತ್ತಿದ್ದಾರೆ.

ಭಟ್ಕಳದ ಪುರವರ್ಗದ ಯುವಕರ ಕಿರುಚಿತ್ರ

ಪ್ರೀತಿಯ ಜೊತೆಗೆ ಸಸ್ಪೆನ್ಸ್​​​​​​​​, ಥ್ರಿಲ್ಲಿಂಗ್​​​​​ ಅಂಶಗಳನ್ನು ಸೇರಿಸಿ ಸಂದೇಶವೊಂದನ್ನು ಹೊತ್ತು ಭಟ್ಕಳದ ಪುರವರ್ಗದ ಸುಮಾರು 15 ಮಂದಿ ಯುವಕರು ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ವಿಶೇಷವೆಂದರೆ ಈ ಯುವಕರಲ್ಲಿ ಯಾರೂ, ಯಾವುದೇ ವಿಭಾಗದಲ್ಲಿ ನುರಿತವರಲ್ಲ. ಚಿತ್ರವನ್ನು ರೆಕಾರ್ಡ್ ಮಾಡುವವರಿಂದ ಹಿಡಿದು ಎಡಿಟ್ ಮಾಡಿದವರು ಎಲ್ಲರೂ ಹೊಸಬರೆ. ಈ ತಂಡ 'ಮೋಜಿನ ಬಲೆ' ಎಂಬ ಕಿರುಚಿತ್ರವನ್ನು ತಯಾರಿಸಿದೆ.

'ಮೋಜಿನ ಬಲೆ' ಕಿರುಚಿತ್ರ ತಂಡ

ಮೂಢನಂಬಿಕೆ, ಅತಿಯಾಸೆಗಳಿಗೆ ಬಹುತೇಕ ಜನರು ಬಲಿಯಾಗುತ್ತಾರೆ. ಈ ಅಂಶವನ್ನು ಆಧರಿಸಿ ಪ್ರೀತಿಯ ಬಲೆಯಲ್ಲಿರುವ ಯುವಕ ತನ್ನ ಸ್ನೇಹಿತರನ್ನು ದಾರಿ ತಪ್ಪಿಸಿ, ಮೋಜಿನ ಬಲೆಗೆ ಸಿಲುಕಿಸಲು ಯತ್ನಿಸುವುದೇ ಈ ಕಿರುಚಿತ್ರದ ಕಥಾವಸ್ತು. ಪುರವರ್ಗದ ರವಿ ನಾಯ್ಕ ಹಾಗೂ ಮಹೇಶ ನಾಯ್ಕ ಈ ಕಿರುಚಿತ್ರಕ್ಕೆ ಕಥೆ ಬರೆದಿದ್ದಾರೆ. ತಮ್ಮ ಊರಿನ ಯುವಕರ ತಂಡವನ್ನು ಬಳಸಿಕೊಂಡು ರವಿವರ್ಗ ನಿರ್ದೇಶನ ಮಾಡಿದ್ದಾರೆ.

'ಮೋಜಿನ ಬಲೆ'

ಲಾಕ್​ಡೌನ್​​ಗೂ ಮೊದಲೇ ಈ ಕಿರುಚಿತ್ರವನ್ನು ರೆಕಾರ್ಡ್ ಮಾಡಲಾಗಿದ್ದು, ಈಗ ಎಡಿಟ್ ಮಾಡಲಾಗಿದೆ. ಹೊಸಬರೇ ಆಗಿರುವುದರಿಂದ ತಪ್ಪುಗಳು ಆಗುವುದು ಸಹಜ. ಆದರೆ ಈ ಯುವತಂಡ ಸಮಾಜಕ್ಕೆ ಒಂದು ಸಂದೇಶ ನೀಡಲು ಬಯಸಿರುವುದರಿಂದ ಇವರನ್ನು ಪ್ರೋತ್ಸಾಹಿಸಬೇಕಿದೆ. ಪುರವರ್ಗದ ಯುವಕರಾದ ರವಿ, ಚೇತನ್, ಮಂಜುನಾಥ, ರಾಜೇಶ, ಮಹೇಶ, ಜಗದೀಶ, ನವೀನ್, ವಾಮನ್, ವಿಜಯ್, ಲೋಕೇಶ, ಪುರುಷೋತ್ತಮ, ಸಂತೋಷ, ನಾಗರಾಜ್, ಮಂಜು ಗೊರಟೆ, ರಾಮ್ ತಲಾಂದ, ರತನ್ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಕ್ಯಾಮರಾಮ್ಯಾನ್​​​​​​​​​​​​​ ಆಗಿ ರತನ್ ಹಾಗೂ ಮಹೇಶ ಕೆಲಸ ನಿರ್ವಹಿಸಿದ್ದಾರೆ.

ABOUT THE AUTHOR

...view details