ಕಾರವಾರ: ಜಾನಪದ ಕೋಗಿಲೆ, ಪದ್ಮಶ್ರಿ ಸುಕ್ರಿ ಬೊಮ್ಮಗೌಡ ಉಸಿರಾಟದ ಸಮಸ್ಯೆಯಿಂದ ಗುರುವಾರ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಪದ್ಮಶ್ರೀ ಸುಕ್ರಜ್ಜಿಗೆ ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಜಾನಪದ ಕೋಗಿಲೆ - ಸುಕ್ರಿ ಬೊಮ್ಮ ಗೌಡ
ಜಾನಪದ ಕೋಗಿಲೆ ಎಂದೇ ಖ್ಯಾತಿ ಪಡೆದ ಸುಕ್ರಿ ಬೊಮ್ಮಗೌಡ ಉಸಿರಾಟದ ಸಮಸ್ಯೆಯಿಂದ ಗುರುವಾರ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದಾರೆ.
ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದು
ಅಂಕೋಲಾದ ಬಡಗೇರಿಯಲ್ಲಿದ್ದ ಸುಕ್ರಜ್ಜಿಗೆ ಬೆಳಿಗ್ಗೆಯಿಂದಲೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆ ತಂದಿದ್ದಾರೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ಸುಕ್ರಜ್ಜಿ ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಹೆಚ್ಚಾಗಿದೆ. ಸಿಟಿ ಸ್ಕ್ಯಾನ್ ಹಾಗೂ ತುರ್ತು ನಿಗಾ ಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್ ತಿಳಿಸಿದ್ದಾರೆ.