ಕರ್ನಾಟಕ

karnataka

ETV Bharat / state

ಒಂದೇ ತಾಲೂಕಿನ ಇಬ್ಬರು ಆತ್ಮಹತ್ಯೆ: ಕಾರಣ ನಿಗೂಢ..! - Sirsi news

ಶಿರಸಿ ಮೂಲದ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಒಂದೇ ತಾಲೂಕಿನ ಇಬ್ಬರು ವ್ಯಕ್ತಿಗಳ ಆತ್ಮಹತ್ಯೆ: ಕಾರಣ ನಿಗೂಢ..!

By

Published : Oct 20, 2019, 10:10 PM IST

ಶಿರಸಿ:ಶಿರಸಿ ಮೂಲದ ಚಾಲಕನೋರ್ವ ಕೆಲಸಕ್ಕೆಂದು ಸುರತ್ಕಲ್ ತೆರಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಶಿರಸಿ ತಾಲೂಕಿನ ಯಡಳ್ಳಿಯ ಸುಧಾಕರ ನಾಯ್ಕ (29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಚಾಲಕ ವೃತ್ತಿಯಲ್ಲಿದ್ದ ಈತ ಕಳೆದ ಕೆಲ ದಿನಗಳ ಹಿಂದೆ ಕೆಲಸಕ್ಕೆ ಹೋಗಿಬರುತ್ತೇನೆಂದು ಹೋಗಿ ನಾಪತ್ತೆಯಾಗಿದ್ದ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಆತನ ಹೆಂಡತಿ ನಾಪತ್ತೆ ಪ್ರಕರಣ ದಾಖಲಿಸಿದ್ದಳು.

ನಾಪತ್ತೆ ಪ್ರಕರಣ ದಾಖಲಾದ ದಿನದಿಂದ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಈಗ ಕಾಣೆಯಾದವ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ‌

ಇನ್ನು ಇದೇ ತಾಲೂಕಿನ ವೃದ್ಧನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ. ಯಲ್ಲಾಪುರ ಮೂಲದ ವಿಠ್ಠಲ್ ಆಚಾರಿ (52) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಸಿದ್ದಾಪುರದ ರವೀಂದ್ರ ನಗರದ ಬಾಡಿಗೆ ಮನೆಯಲ್ಲಿ ಹೆಂಡತಿ ಸಮೇತ ವಾಸವಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಕುರಿತಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details