ಕರ್ನಾಟಕ

karnataka

ETV Bharat / state

ಮನೆಯವರು ಮದುವೆಗೆ ಒಪ್ಪುವುದಿಲ್ಲ ಎಂದು ಹೆದರಿ ಪ್ರೇಮಿಗಳ ಆತ್ಮಹತ್ಯೆ - Hebre Hill near Butterfly Falls of Shirazi Taluk

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಮನೆಯಲ್ಲಿ ಮದುವೆಗೆ ನಿರಾಕರಿಸುತ್ತಾರೆ ಎಂದು ಹೆದರಿ ನೇಣಿಗೆ ಶರಣಾಗಿರುವ ಘಟನೆ ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್​ ಬಳಿಯ ಹೆಬ್ರೆ ಬೆಟ್ಟದಲ್ಲಿ ನಡೆದಿದೆ.

sdsd
ಪ್ರೇಮಿಗಳ ಆತ್ಮಹತ್ಯೆ

By

Published : Jan 25, 2021, 10:04 PM IST

ಶಿರಸಿ:ಮನೆಯವರು ಮದುವೆಗೆ ನಿರಾಕರಿಸುತ್ತಾರೆ ಎಂದು ಹೆದರಿ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್​ ಬಳಿಯ ಹೆಬ್ರೆ ಬೆಟ್ಟದಲ್ಲಿ ನಡೆದಿದೆ.

ತೆರಕನಹಳ್ಳಿಯ ಮೇಘನಾ ನಾಯ್ಕ (27) ಹಾಗೂ ಹುಸುರಿಯ ಬೊಬ್ಬನಕೊಡ್ಲಿನ ವಿಕ್ರಮ ಮಾವಿನಕುರ್ವೆ (28) ಮೃತ ದುರ್ದೈವಿಗಳು. ಮೇಘನಾ ಅತಿಥಿ ಉಪನ್ಯಾಸಕಿಯಾಗಿದ್ದು, ವಿಕ್ರಮ್ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಮದುವೆಗೆ ಮನೆಯಲ್ಲಿ ಒಪ್ಪಿಗೆ ನೀಡಿ ಸ್ವಲ್ಪ ದಿನಗಳ ನಂತರ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು.

ಆದರೆ ಮನೆಯವರು ಮದುವೆ ಮಾಡಿಕೊಡುವುದಿಲ್ಲವೇನೋ ಎಂಬ ಅನುಮಾನದಿಂದ ದುಡುಕಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೇಮಿಗಳು ಮೃತಪಟ್ಟ ಕೆಲ ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details