ಕಾರವಾರ:ಕ್ಷುಲ್ಲಕ ಕಾರಣಕ್ಕೆ ಮನೆಯವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ವ್ಯಕ್ತಿಯೋರ್ವ, ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ : ಸಮುದ್ರಕ್ಕೆ ಹಾರಿ ಆತ್ಮಹತ್ಯೆ - karwar Suicide
ಮನೆಯವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ, ಗೋಕರ್ಣದ ಮೇಲಿನಕೇರಿಯ ವಿನಾಯಕ ಅನಂತ ಗೌಡ ಎಂಬ ವ್ಯಕ್ತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
![ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ : ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-7238261-736-7238261-1589724269812.jpg)
ಸಮುದ್ರಕ್ಕೆ ಹಾರಿ ಆತ್ಮಹತ್ಯೆ
ಗೋಕರ್ಣದ ಮೇಲಿನಕೇರಿಯ ವಿನಾಯಕ ಅನಂತ ಗೌಡ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಯಾವುದೋ ಕಾರಣಕ್ಕೆ ಮನೆಯಲ್ಲಿ ಮನಸ್ತಾಪ ಮಾಡಿಕೊಂಡಿದ್ದು, ಶನಿವಾರ ರಾತ್ರಿ ಸಮುದ್ರಕ್ಕೆ ಹಾರಿದ್ದಾನೆ ಎನ್ನಲಾಗಿದೆ.
ಇಂದು ಈತನ ಮೃತದೇಹ ಸಮುದ್ರದಲ್ಲಿ ತೇಲಾಡುತ್ತಿರುವುದನ್ನು ತಿಳಿದ ಗೋಕರ್ಣ ಪೊಲೀಸರು, ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ.