ಕರ್ನಾಟಕ

karnataka

ETV Bharat / state

ಕಾರವಾರ : ಸುಗ್ಗಿ ವೇಷದಾರಿಯಿಂದ ಕೊರೊನಾ ಜಾಗೃತಿ - ಕರಡಿ ವೇಷ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯ

ಕೇರಳ, ಮಹಾರಾಷ್ಟ್ರದ ಪರಿಸ್ಥಿತಿ ತಿಳಿಸಿ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ಪರಿಸ್ಥಿತಿಗೆ ಎಲ್ಲರನ್ನು ನೂಕದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಇದೀಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ..

suggi-impersonator-corona-awareness-in-karwar
ಸುಗ್ಗಿ ವೇಷದಾರಿಯಿಂದ ಕೊರೊನಾ ಜಾಗೃತಿ

By

Published : Mar 28, 2021, 8:33 PM IST

ಕಾರವಾರ :ಹೋಳಿ ವೇಳೆ ಕರಾವಳಿ ಭಾಗಗಳಲ್ಲಿ ಬಗೆ ಬಗೆಯ ವೇಷ ತೋಡುವ ವೇಷದಾರಿಗಳು ಮನೆ ಮನೆಗೆ ತೆರಳಿ ಹಣ ಪಡೆದು ರಂಜಿಸುತ್ತಾರೆ. ಆದರೆ, ಇಲ್ಲೊಬ್ಬ ವೇಷದಾರಿ ರಸ್ತೆ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದವರಿಗೆ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ.

ಸುಗ್ಗಿ ವೇಷದಾರಿಯಿಂದ ಕೊರೊನಾ ಜಾಗೃತಿ

ಓದಿ: ರಮೇಶ್​ ಜಾರಕಿಹೊಳಿ ಮನೆಗೆ ನುಗ್ಗಲು ಕಾಂಗ್ರೆಸ್​ ಮಹಿಳಾ ಘಟಕ ಯತ್ನ: ಪೊಲೀಸರೊಂದಿಗೆ ಮಾತಿನ ಚಕಮಕಿ

ಕರಾವಳಿಯಲ್ಲಿ ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಸುಗ್ಗಿ ಸಂಭ್ರಮ ಮನೆ ಮಾಡುತ್ತದೆ. ಈ ಭಾಗದಲ್ಲಿ ಸುಗ್ಗಿ ಕಟ್ಟುವ ಹಾಲಕ್ಕಿ, ಕೋಮಾರಪಂತ ಸೇರಿ ವಿವಿಧ ಸಮುದಾಯದವರು ವಾರಗಳ ಕಾಲ ಮನೆ ಬಿಟ್ಟು ಹಾರ ತುರಾಯಿಯೊಂದಿಗೆ ಬಗೆಬಗೆಯ ವೇಷ ತೊಟ್ಟು ಮನೆ ಮನೆ ಸುತ್ತಿ ಸುಗ್ಗಿ ಆಡುತ್ತಾರೆ.

ಅದರಲ್ಲಿಯೂ ಕರಡಿ ವೇಷ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯಗೊಂಡಿದೆ. ಮನೆ ಮನೆಗೆ ತೆರಳಿ ಹಣ ಕೂಡ ಸಂಗ್ರಹಿಸುತ್ತಾರೆ. ಆದರೆ, ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನೆಲೆ ಕೊರೊನಾ ಜಾಗೃತಿಗೆ ಮುಂದಾದ ವ್ಯಕ್ತಿಯೋರ್ವ, ಮಾರುಕಟ್ಟೆ-ರಸ್ತೆಗಳಲ್ಲಿ ಮಾಸ್ಕ್ ಧರಿಸದವರನ್ನು ತಡೆದು ಕೊರೊನಾ ಬಗ್ಗೆ ಎಚ್ಚರಿಸಿದ್ದಾರೆ.

ಕೇರಳ, ಮಹಾರಾಷ್ಟ್ರದ ಪರಿಸ್ಥಿತಿ ತಿಳಿಸಿ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ಪರಿಸ್ಥಿತಿಗೆ ಎಲ್ಲರನ್ನು ನೂಕದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಇದೀಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details