ಕಾರವಾರ :ಕೊರೊನಾ ಸೋಂಕಿತ ತುಂಬು ಗರ್ಭಿಣಿಗೆ ಸಿಜೇರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸುವಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ.
ಸೋಂಕಿತ ಮಹಿಳೆಗೆ ಯಶಸ್ವಿ ಸಿಜರಿಯನ್ ಹೆರಿಗೆ ಮಾಡಿಸಿದ ಕ್ರೀಮ್ಸ್ ವೈದ್ಯ ತಂಡ - ಕೊರೊನಾ ಸೋಂಕಿತ ಮಹಿಳೆಗೆ ಸಿಜರಿಯನ್ ಹೆರಿಗೆ
ಇಂದು ಸರ್ಜನ್ ಡಾ. ಶಿವಾನಂದ್ ಕುಡ್ತಲ್ಕರ್ ನೇತೃತ್ವದ ತಂಡ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಿಸುವ ಮೂಲಕ ಆರೋಗ್ಯಕರ ಮಗುವಿಗೆ ಜನನ ನೀಡಿದ್ದಾಳೆ..
![ಸೋಂಕಿತ ಮಹಿಳೆಗೆ ಯಶಸ್ವಿ ಸಿಜರಿಯನ್ ಹೆರಿಗೆ ಮಾಡಿಸಿದ ಕ್ರೀಮ್ಸ್ ವೈದ್ಯ ತಂಡ successful-cesarean-delivery-for-corona-infected-woman](https://etvbharatimages.akamaized.net/etvbharat/prod-images/768-512-8171625-thumbnail-3x2-corona.jpg)
ಕ್ರೀಮ್ಸ್ ವೈದ್ಯ ತಂಡ
ಜುಲೈ 22ರಂದು ಸೋಂಕು ಪತ್ತೆಯಾದ ಕಾರಣ ಕಾರವಾರ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದಳು. ಇಂದು ಸರ್ಜನ್ ಡಾ. ಶಿವಾನಂದ್ ಕುಡ್ತಲ್ಕರ್ ನೇತೃತ್ವದ ತಂಡ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಿಸುವ ಮೂಲಕ ಆರೋಗ್ಯಕರ ಮಗುವಿಗೆ ಜನನ ನೀಡಿದ್ದಾಳೆ.
ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದು, ಸಿಜೇರಿಯನ್ ತಂಡದಲ್ಲಿದ್ದ ಎಲ್ಲರನ್ನು ಜಿಲ್ಲಾಧಿಕಾರಿ ಡಾ. ಕೆ ಹರೀಶ್‌ಕುಮಾರ್, ಕ್ರೀಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಅಭಿನಂದಿಸಿದ್ದಾರೆ.
Last Updated : Jul 26, 2020, 8:16 AM IST