ಕರ್ನಾಟಕ

karnataka

ETV Bharat / state

ಡೆತ್​​​​ ನೋಟ್​​​​ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ - ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಶಿರಸಿಯ ಜೆ.ಎಂ.ಜೆ ಕಾಲೇಜಿನ ಹಾಸ್ಟೆಲ್​ನಲ್ಲಿ ಉಳಿದುಕೊಂಡು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಹಾವೇರಿಯ ನೆಗಳೂರಿನ ಮೊಬಿನ್ ಎಂಬ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾರ್ಥಿನಿ ಆತ್ಮಹತ್ಯೆ

By

Published : Aug 15, 2019, 9:02 PM IST

ಶಿರಸಿ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೋರ್ವಳು ಕಾಲೇಜಿನ ಶೌಚಾಲಯದ ಕಿಟಕಿಗೆ ವೇಲು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜೆ.ಎಂ.ಜೆ. ಕಾಲೇಜಿನಲ್ಲಿ ನಡೆದಿದೆ.

ಶಿರಸಿಯ ಜೆ.ಎಂ.ಜೆ ಕಾಲೇಜಿನ ಹಾಸ್ಟೆಲ್​ನಲ್ಲಿ ಉಳಿದುಕೊಂಡು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಹಾವೇರಿಯ ನೆಗಳೂರಿನ ಮೊಬಿನ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬಕ್ರೀದ್ ಆಚರಣೆಗೆ ಹಾವೇರಿಗೆ ತೆರಳಿದ್ದ ವಿದ್ಯಾರ್ಥಿನಿ, ಬುಧವಾರ ವಾಪಾಸ್ ಶಿರಸಿಗೆ ಬಂದಿದ್ದಳು.

ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೋದ ವಿದ್ಯಾರ್ಥಿನಿ, ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಮೊಬಿನ್, ಎಸ್.ಎಸ್.ಎಲ್.ಸಿಯಲ್ಲಿ ನವೋದಯ ಶಾಲೆಯಲ್ಲಿ ಶೇ. 97ರಷ್ಟು ಫಲಿತಾಂಶ ಪಡೆದಿದ್ದಳು. ಪ್ರವಾಹ ಇರುವ ಕಾರಣ ಒಂದು ವಾರ ಮನೆಯಲ್ಲಿ ಉಳಿದುಕೊಂಡಿದ್ದ ಮೊಬಿನ್, ತನ್ನ ಹೆಣವನ್ನು ಅಪ್ಪನ ಮನೆಗೆ ತೆಗೆದುಕೊಂಡು ಹೋಗುವುದು ಬೇಡ.‌ ಬದಲಿಗೆ ಅಜ್ಜಿ ಮನೆಯಲ್ಲಿ ದಫನ್ ಮಾಡಿ ಎಂದು ಡೆತ್ ನೋಟ್ ‌ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್​​ ನೋಟ್​​

ಕಾಲೇಜಿನ ‌ಇನ್ನೋರ್ವ ವಿದ್ಯಾರ್ಥಿನಿ ಶೌಚಾಲಯಕ್ಕೆ ತೆರಳಿದಾಗ ಬಾಗಿಲು ತೆಗೆಯದ ಕಾರಣ ಅನುಮಾನಗೊಂಡು ಕಾಲೇಜಿನ ಶಿಕ್ಷಕಿಗೆ ತಿಳಿಸಿ ಅವರು ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ವೇಲನ್ನು ಕಟ್ ಮಾಡಿದರೂ ಪ್ರಾಣ ಉಳಿದಿಲ್ಲ ಎನ್ನಲಾಗಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details