ಶಿರಸಿ:ಭಾರತದ ಅನ್ನ ತಿಂದು ನೀರು ಕುಡಿದು ಪಾಕ್ ಪರ ಘೋಷಣೆ ಕೂಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾರತದ ಅನ್ನ ತಿಂದು, ಪಾಕ್ ಪರ ಘೋಷಣೆ ಕೂಗುವವರ ಮೇಲೆ ಕಠಿಣ ಕ್ರಮ: ಕೋಟ ಶ್ರೀನಿವಾಸ ಪೂಜಾರಿ - ಕೋಟ ಶ್ರೀನಿವಾಸ ಪೂಜಾರಿ ಲೆಟೆಸ್ಟ್ ನ್ಯೂಸ್
ಭಾರತದ ಅನ್ನ ತಿಂದು ನೀರು ಕುಡಿದು ಪಾಕ್ ಪರ ಘೋಷಣೆ ಕೂಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
![ಭಾರತದ ಅನ್ನ ತಿಂದು, ಪಾಕ್ ಪರ ಘೋಷಣೆ ಕೂಗುವವರ ಮೇಲೆ ಕಠಿಣ ಕ್ರಮ: ಕೋಟ ಶ್ರೀನಿವಾಸ ಪೂಜಾರಿ ಕೋಟ ಶ್ರೀನಿವಾಸ ಪೂಜಾರಿ](https://etvbharatimages.akamaized.net/etvbharat/prod-images/768-512-6258513-thumbnail-3x2-kagl.jpg)
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲೆ ಹುಟ್ಟಿ, ಬೆಳೆದು ದೇಶದ ವಿರುದ್ಧ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ತಾಳ್ಮೆಗೂ ಒಂದು ಮಿತಿ ಇದೆ. ಭಾರತದ ವಿರುದ್ಧ ಘೋಷಣೆ ಕೂಗಿದವರಿಗೆ ಜೈಲಿಗಟ್ಟುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಎಚ್ಚರಿಸಿದರು.
ದೊರೆಸ್ವಾಮಿ ವಿರುದ್ಧ ಯತ್ನಾಳ ಹೇಳಿಕೆ ತನಗೆ ಗೊತ್ತಿಲ್ಲ. ಯತ್ನಾಳ ಮತ್ತು ದೊರೆಸ್ವಾಮಿ ಘರ್ಷಣೆ ಯಾವುದೇ ಗೊಂದಲ ಇಲ್ಲದೆ ಪರಿಹಾರ ಆಗಲಿದೆ. ಕೇಂದ್ರದಿಂದ 15ನೇ ಹಣಕಾಸಿನ ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯ ಆಗಿದೆ ಎಂಬುದು ತಪ್ಪು. ಮುಂದೆ ಸಮರ್ಪಕ ಹಣ ಕೇಂದ್ರದಿಂದ ಬರುವ ನಿರೀಕ್ಷೆ ಇದೆ ಎಂದು ಸಚಿವರು ಸಮರ್ಥಿಸಿಕೊಂಡರು.