ಭಟ್ಕಳ (ಉತ್ತರ ಕನ್ನಡ):ಪಟ್ಟಣದಲ್ಲಿ ತಾಲೂಕಾಡಳಿದ ಪರವಾನಗಿ ಇಲ್ಲದೆ ಕೆಲವು ಖಾಸಗಿ ವೈದ್ಯರು ಬಂದು ತಪಾಸಣೆ ನಡೆಸಿ ಔಷಧ ನೀಡುತ್ತಿದ್ದಾರೆ. ಜೊತೆಗೆ ಇತ್ತೀಚಿಗೆ ಮೃತಪಟ್ಟ ವ್ಯಕ್ತಿಗಳ ಕುರಿತು ಆಡಳಿತದ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿದ್ದು, ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರಾಯ್ ಹೇಳಿದರು.
ಪರವಾನಗಿ ಇಲ್ಲದ ವೈದ್ಯರ ವಿರುದ್ಧ ಕಠಿಣ ಕ್ರಮ: ಐಜಿಪಿ ದೇವಜ್ಯೋತಿ ರಾಯ್ - IGP Devajyothi roy
ತಾಲೂಕಾಡಳಿತ, ಪೊಲೀಸರ ಪರವಾನಗಿ ಇಲ್ಲದೆ ಖಾಸಗಿ ವೈದ್ಯರು ತಪಾಸಣೆ ನಡೆಸಬಾರದು. ಒಂದು ವೇಳೆ ಅಂತಹ ಘಟನೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರಾಯ್ ಎಚ್ಚರಿಕೆ ನೀಡಿದ್ದಾರೆ.
![ಪರವಾನಗಿ ಇಲ್ಲದ ವೈದ್ಯರ ವಿರುದ್ಧ ಕಠಿಣ ಕ್ರಮ: ಐಜಿಪಿ ದೇವಜ್ಯೋತಿ ರಾಯ್ Strict action against unlicensed doctors: IGP Devyasyoti Roy](https://etvbharatimages.akamaized.net/etvbharat/prod-images/768-512-7076319-1098-7076319-1588703058100.jpg)
ಭಟ್ಕಳದ ಪ್ರವಾಸಿ ಮಂದಿರದಲ್ಲಿ ಧಾರ್ಮಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತರಬೇಕು. ತಾಲೂಕಾಡಳಿತ, ಪೊಲೀಸರ ಪರವಾನಗಿ ಇಲ್ಲದೆ ಖಾಸಗಿ ವೈದ್ಯರು ತಪಾಸಣೆ ನಡೆಸಬಾರದು. ಒಂದು ವೇಳೆ ಅಂತಹ ಘಟನೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಉತ್ತರ ಕನ್ನಡ ಎಸ್‍ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಪಟ್ಟಣದಲ್ಲಿ ಹೆಲ್ತ್ ಸರ್ವೇ ಆರಂಭಿಸಲಾಗುವುದು. ಅದಕ್ಕೆ ಇಲ್ಲಿನ ಸಾರ್ವಜನಿಕರು ಸಹಕಾರ ನೀಡಬೇಕು. ಇಲ್ಲವೆಂದಾದಲ್ಲಿ ಬಲವಂತವಾಗಿ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನಿಮ್ಮ ಮನೆಗಳ ಬಳಿ ಹೊರಗಿನಿಂದ ಬಂದರೆ ಅಥವಾ ಇಲ್ಲಿನ ವ್ಯಕ್ತಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋಗಿ ಬಂದರೆ ಮಾಹಿತಿ ನೀಡಬೇಕು. ಇದು ಸರ್ಕಾರದ ವಿರುದ್ಧ ಹೋಗುವ, ಲಾಕ್ಡೌನ್ ಉಲ್ಲಂಘಿಸುವ ಸಮಯವಲ್ಲ ಎಂದರು.