ಕಾರವಾರ:ಹಳೆ ಕಟ್ಟಡ ತೆರವು ಮಾಡುವ ವೇಳೆ ಚಿರೆಕಲ್ಲುಗಳು ಬಿದ್ದು ಕೂಲಿಗೆ ಬಂದಿದ್ದ ದಂಪತಿ ಪೈಕಿ ಪತ್ನಿ ಮೃತಪಟ್ಟು, ಪತಿ ಗಂಭೀರ ಗಾಯಗೊಂಡಿರುವ ಘಟನೆ ಕಾರವಾರ ನಗರದ ಸರ್ಕಾರಿ ಪ್ರೌಢಶಾಲೆ ಬಳಿ ನಡೆದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದದ ಸದ್ಯ ಸೋನಾರವಾಡದ ನಿವಾಸಿಯಾಗಿರುವ ಯಮನೂರ ರಾಮವ್ವ ಚಿತವಾಡಗ (36) ಮೃತಪಟ್ಟ ದುರ್ದೈವಿ. ಈಕೆಯ ಪತಿ ಯಮನೂರ ಬಸಪ್ಪ ಚಿತವಾಡಿಗ (40) ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೂಲಿ ಕೆಲಸಕ್ಕೆ ಬಂದು ಇಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.