ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಮತ್ತೆ ನೆರೆ ಆತಂಕ; ಸನ್ನದ್ಧ ಸ್ಥಿತಿಯಲ್ಲಿ ಎಸ್​ಡಿಆರ್​ಎಫ್ - Flood Anxiety In Uttara Kannada

ಮಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳ ಇದ್ದು ಜಿಲ್ಲೆಯಲ್ಲಿ ಸಮಸ್ಯೆ ಆದರೆ ಅಲ್ಲಿಂದಲೇ ತಂಡದವರು ಆಗಮಿಸಬೇಕಿತ್ತು. ಈ ಬಾರಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಕುಮಟಾದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳದವರನ್ನು ಜಿಲ್ಲೆಯಲ್ಲಿಯೇ ಮಳೆಗಾಲ ಮುಗಿಯುವವರೆಗೂ ಮೊಕ್ಕಾಂ ಹೂಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

Uttara Kannada Flood Anxiety
Uttara Kannada Flood Anxiety

By

Published : Jun 14, 2022, 6:09 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರಿ ಮಳೆಯಾಗುತ್ತಿದ್ದು ಮಳೆಗಾಲ ಅಂದರೆ ಸಾಕು ಜಿಲ್ಲೆಯ ಜನರು ಭಯ ಪಡುವಂತಾಗಿದೆ. ಹೆಚ್ಚು ಮಳೆಯಾದಾಗ ನೆರೆ ಸೃಷ್ಟಿ, ಗುಡ್ಡ ಕುಸಿತ ಹೀಗೆ... ಹಲವು ಅನಾಹುತಗಳಿಂದ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಹಲವು ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಇನ್ನು ಒಮ್ಮೆಲೆ ನೆರೆ ಸೃಷ್ಟಿಯಾದಾಗ ಜನರ ರಕ್ಷಣೆ ಮಾಡೋದು ಜಿಲ್ಲಾಡಳಿತಕ್ಕೂ ದೊಡ್ಡ ತಲೆ ನೋವಿನ ಕೆಲಸವಾಗಿತ್ತು. ಈ ಬಾರಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿಯೇ ಎಸ್.ಡಿ.ಆರ್.ಎಫ್ ಘಟಕ ಪ್ರಾರಂಭಿಸುವ ಮೂಲಕ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.


ಭಾರಿ ಮಳೆಯಿಂದಾಗಿ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗುತ್ತದೆ. ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತವಾಗಿ ಜನರು ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ಗುಡ್ಡ ಕುಸಿತ, ಗ್ರಾಮ ಮುಳುಗಡೆಯಾದ ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣ ರಕ್ಷಣೆ ಮಾಡಲು ಜಿಲ್ಲಾಡಳಿತ ಪರದಾಡಬೇಕಿತ್ತು.

ಮಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳದವರು ಇದ್ದು ಜಿಲ್ಲೆಯಲ್ಲಿ ಸಮಸ್ಯೆ ಆದರೆ ಅಲ್ಲಿಂದಲೇ ಆಗಮಿಸಬೇಕಿತ್ತು. ಕಳೆದ ಬಾರಿ ರಸ್ತೆ ಸಹ ಕಡಿತವಾಗಿ ಮಂಗಳೂರು ಹಾಗೂ ಬೆಳಗಾವಿಯಿಂದ ರಕ್ಷಣಾ ತಂಡ ಜಿಲ್ಲೆಗೆ ಬರಬೇಕಾದರೆ ಪರದಾಡಬೇಕಿತ್ತು. ಈ ನಿಟ್ಟಿನಲ್ಲಿ ಈ ಬಾರಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಕುಮಟಾದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳದವರನ್ನು ಜಿಲ್ಲೆಯಲ್ಲಿಯೇ ಮಳೆಗಾಲ ಮುಗಿಯುವವರೆಗೆ ಮೊಕ್ಕಾಂ ಹೂಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಜಿಲ್ಲೆಯ ಎಲ್ಲೇ ನೆರೆ ಸೃಷ್ಟಿಯಾದರು ತಕ್ಷಣಾ ರಕ್ಷಣಾ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ದಳದವರು ತೆರಳುವ ನಿಟ್ಟಿನಲ್ಲಿ ಮುಂಜಿತವಾಗಿಯೇ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ತಿಳಿಸಿದ್ದಾರೆ.

ಕಳೆದ ವರ್ಷ ಜಿಲ್ಲೆಯ ಯಲ್ಲಾಪುರ, ಕಾರವಾರ, ಶಿರಸಿ ಸೇರಿದಂತೆ ಹಲವೆಡೆ ಗುಡ್ಡ ಕುಸಿತವಾಗಿ ಹಲವು ಗ್ರಾಮಗಳು ಸಂಪರ್ಕವೇ ಇಲ್ಲದಂತಾಗಿತ್ತು. ಅದರಲ್ಲೂ ಯಲ್ಲಾಪುರ ತಾಲೂಕಿನ ಕಳಚೆ ಅನ್ನುವ ಗ್ರಾಮ ಇಡೀ ಗ್ರಾಮವೇ ಗುಡ್ಡ ಕುಸಿತದಿಂದ ಕೊಚ್ಚಿ ಹೋಗಿತ್ತು. ಈ ಬಾರಿ ಸಹ ಗುಡ್ಡ ಕುಸಿತವಾದ ಸ್ಥಳಗಳಿಗೆ ಭೇಟಿ ನೀಡಿದ ಪರಿಣಿತ ತಂಡ, ಮಳೆ ಅಧಿಕವಾದರೆ ಜಿಲ್ಲೆಯ ಐದು ಕಡೆ ಗುಡ್ಡ ಕುಸಿತ ಎದುರಾಗಬಹುದು. ಜಿಲ್ಲಾಡಳಿತ ಮುಂಜಾಗೃತೆ ವಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಮಳೆಗಾಲ ಇರುವ ಮೂರು ತಿಂಗಳ ಕಾಲ ಜಿಲ್ಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳದ ಸದಸ್ಯರ ತಂಡ ಸಿದ್ದವಾಗಿದ್ದು ಜಿಲ್ಲಾಡಳಿತ ಕ್ರಮ ಉತ್ತಮವಾಗಿದೆ ಎನ್ನುತ್ತಾರೆ ಸ್ಥಳೀಯರು.


ಈ ಬಾರಿ ಬೇರೆ ಜಿಲ್ಲೆಯಿಂದ ಬಂದ ರಾಜ್ಯ ವಿಪತ್ತು ನಿರ್ವಹಣಾ ದಳದವರು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು, ಮುಂದಿನ ವರ್ಷದಿಂದ ಶಾಶ್ವತವಾಗಿ ಜಿಲ್ಲೆಯಲ್ಲೊಂದು ಘಟಕವನ್ನು ಪ್ರಾರಂಭಿಸುತ್ತೇವೆ ಎನ್ನುವುದು ಜಿಲ್ಲಾಧಿಕಾರಿಗಳ ಅಭಿಪ್ರಾಯ.

ABOUT THE AUTHOR

...view details