ಕರ್ನಾಟಕ

karnataka

ETV Bharat / state

ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ಮಾರಿಕಾಂಬಾ ಸರ್ಕಾರಿ ಶಾಲೆಗೆ ಮತ್ತೆರಡು ರ‍್ಯಾಂಕ್ - ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆಗೆ ಮತ್ತೆರಡು ರ‍್ಯಾಂಕ್

ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ.

Two more rank for Marikamba Government School
ಮಾರಿಕಾಂಬಾ ಸರ್ಕಾರಿ ಶಾಲೆಗೆ ಮತ್ತೆರಡು ರ‍್ಯಾಂಕ್

By

Published : Jun 8, 2022, 8:24 PM IST

ಶಿರಸಿ:ಎಸ್ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಬುಧವಾರ ಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ದೀಕ್ಷಾ ರಾಜು ನಾಯ್ಕ ಹಾಗೂ ಲತಾ ಸವಣೂರು ಶೇ.100 ಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳು.

ಇವರಿಬ್ಬರು ಕ್ರಮವಾಗಿ 1 ಅಂಕ ಮತ್ತು 5 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೀಕ್ಷಾಗೆ ಕನ್ನಡದಲ್ಲಿ 1 ಹಾಗೂ ಲತಾಗೆ ಸಮಾಜದಲ್ಲಿ 1 ಮತ್ತು ಕನ್ನಡದಲ್ಲಿ 4 ಹೆಚ್ಚುವರಿ ಅಂಕಗಳು ಲಭಿಸಿವೆ. ಈ ಹಿಂದೆ ದೀಕ್ಷಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಕೃಷ್ಣ ಕಲೆಯಲ್ಲಿ ಮೂಡಿದ ಬೊಮ್ಮಾಯಿ ಭಾವಚಿತ್ರ : ಕಲಾವಿದನಿಂದ ಸಿಎಂ ಗೆ ಉಡುಗೊರೆ

ABOUT THE AUTHOR

...view details