ಶಿರಸಿ: ರಾಜ್ಯದ ಪ್ರಸಿದ್ಧ ಬನವಾಸಿಯ ಕದಂಬೋತ್ಸವ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ಪುರುಷ ಮತ್ತು ಮಹಿಳೆಯರಿಗಾಗಿ ವಿಭಿನ್ನ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ.
ಬನವಾಸಿ ಕದಂಬೋತ್ಸವ ಪ್ರಯುಕ್ತ ಕ್ರೀಡಾ ಸ್ಪರ್ಧೆ ಆಯೋಜನೆ - ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ನ್ಯೂಸ್
ರಾಜ್ಯದ ಪ್ರಸಿದ್ಧ ಬನವಾಸಿಯ ಕದಂಬೋತ್ಸವ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪುರುಷ ಮತ್ತು ಮಹಿಳೆಯರಿಗಾಗಿ ವಿಭಿನ್ನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕದಂಬ ಕಪ್ ಹೆಸರಿನಲ್ಲಿ ಪುರುಷರಿಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಫೆ.5 ರೊಳಗೆ ತಂಡದ ಹೆಸರನ್ನು ನೋಂದಾಯಿಸುವಂತೆ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ. ನಮ್ಮ ಕಾರ್ಯಾಲಯಕ್ಕೆ ಲಿಖಿತವಾಗಿ ಅಥವಾ ಕಾರ್ಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ( acsirsi@gmail.com) ಅರ್ಜಿಯನ್ನು ಸಲ್ಲಿಸಬೇಕು ಎಂದು ವಿನಂತಿಸಿದ್ದಾರೆ.
ಉತ್ಸವದ ನಿಮಿತ್ತ ಬನವಾಸಿಯ ಜಯಂತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಮಹಿಳೆಯರಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ, ಸಂಗೀತ ಖುರ್ಚಿ, ತಲೆಯ ಮೇಲೆ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಹಗ್ಗಜಗ್ಗಾಟ ಆಟವನ್ನು ಸಹ ಆಯೋಜನೆ ಮಾಡಲಾಗಿದೆ ಎಂದು ಉಳ್ಳಾಗಡ್ಡಿ ತಿಳಿಸಿದ್ದಾರೆ.