ಕಾರವಾರ :ಔಷಧ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಸಹಿತ 2.53 ಲಕ್ಷ ಮೌಲ್ಯದ ಸ್ಪಿರಿಟ್ ವಶಕ್ಕೆ ಪಡೆದಿರುವ ಘಟನೆ ನಗರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಇಂದು ನಡೆದಿದೆ.
ಔಷಧ ತುಂಬಿದ ಲಾರಿಯಲ್ಲಿ ಸ್ಪಿರಿಟ್ ಸಾಗಾಟ : 30 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ - ಕಾರವಾರ ಅಬಕಾರಿ ಪೊಲೀಸ್
ಲಾರಿಯಲ್ಲಿದ್ದ 35 ಲೀಟರ್ ಸಾಮರ್ಥ್ಯದ ಒಟ್ಟು 125 ಕ್ಯಾನ್‌ಗಳಲ್ಲಿ ತುಂಬಿಸಿದ್ದ 4,375 ಲೀಟರ್ ಸ್ಪಿರಿಟ್, ಕೃತ್ಯಕ್ಕೆ ಬಳಸಿದ್ದ 20.80 ಲಕ್ಷ ರೂ. ಮೌಲ್ಯದ ಲಾರಿ, 7.14 ಲಕ್ಷ ಮೌಲ್ಯದ 1000 ಬಾಕ್ಸ್ ಔಷಧ ಹಾಗೂ 2,53,750 ರೂ. ಮೌಲ್ಯದ ಸ್ಪಿರಿಟ್ ಸೇರಿ ಒಟ್ಟು 30,47,750 ರೂ. ಸ್ವತ್ತನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕಾರವಾರ ಅಬಕಾರಿ ರಾಣೆಯಲ್ಲಿ ದಾಖಲಾಗಿದೆ..
ಗೋವಾದ ಪೋಂಡಾದಿಂದ ಮುಂಜಾನೆ ಲಾರಿ ಕೇರಳದ ಕೊಚ್ಚಿಗೆ ಹೊರಟಿತ್ತು. ಅನುಮಾನಗೊಂಡ ಅಬಕಾರಿ ಸಿಬ್ಬಂದಿ, ಗೋವಾ-ಕರ್ನಾಟಕ ಗಡಿಭಾಗ ಮಾಜಾಳಿ ಚೆಕ್ ಪೋಸ್ಟ್ ಬಳಿ ತಡೆದಿದ್ದರು. ಔಷಧಿ ಎಂದು ಹೇಳಲಾಗುತ್ತಿದ್ದ ಬಾಕ್ಸ್‌ವೊಂದನ್ನು ಒಪನ್ ಮಾಡಿದಾಗ ಸ್ಪಿರಿಟ್ ಇರುವುದು ಪತ್ತೆಯಾಗಿದೆ.
ಲಾರಿಯಲ್ಲಿದ್ದ 35 ಲೀಟರ್ ಸಾಮರ್ಥ್ಯದ ಒಟ್ಟು 125 ಕ್ಯಾನ್‌ಗಳಲ್ಲಿ ತುಂಬಿಸಿದ್ದ 4,375 ಲೀಟರ್ ಸ್ಪಿರಿಟ್, ಕೃತ್ಯಕ್ಕೆ ಬಳಸಿದ್ದ 20.80 ಲಕ್ಷ ರೂ. ಮೌಲ್ಯದ ಲಾರಿ, 7.14 ಲಕ್ಷ ಮೌಲ್ಯದ 1000 ಬಾಕ್ಸ್ ಔಷಧ ಹಾಗೂ 2,53,750 ರೂ. ಮೌಲ್ಯದ ಸ್ಪಿರಿಟ್ ಸೇರಿ ಒಟ್ಟು 30,47,750 ರೂ. ಸ್ವತ್ತನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕಾರವಾರ ಅಬಕಾರಿ ರಾಣೆಯಲ್ಲಿ ದಾಖಲಾಗಿದೆ.