ಕಾರವಾರ: ನಾಗರ ಪಂಚಮಿಯಂದು ಎಲ್ಲೆಡೆ ಕಲ್ಲು ನಾಗರಗಳಿಗೆ ಇಲ್ಲವೇ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲಿ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಗರಪಂಚಮಿಯನ್ನು ಆಚರಿಸಿದ್ದಾರೆ.
ವಿಕಲ ಚೇತನರಿಗೆ ಹಾಲು ವಿತರಣೆ... ಜನಶಕ್ತಿ ವೇದಿಕೆಯಿಂದ ವಿಶಿಷ್ಟ ನಾಗರ ಪಂಚಮಿ
ಕಾರವಾರದ ಜನಶಕ್ತಿ ವೇದಿಕೆ ಸದಸ್ಯರು ನಾಗರಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ರು. ನಾಗರಪಂಚಮಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಸಿಹಿ ಹಾಗೂ ಉಪಹಾರ ನೀಡಿದ್ರು.
ಕಾರವಾರದ ಜನಶಕ್ತಿ ವೇದಿಕೆಯು ಇಂತಹದೊಂದು ಅರ್ಥಪೂರ್ಣ ಆಚರಣೆ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿದೆ. ನಾಗರಪಂಚಮಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶಾ ನಿಕೇತನ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಸಿಹಿ ಹಾಗೂ ಉಪಹಾರವನ್ನು ನೀಡಿ ವಿಶೇಷವಾಗಿ ನಾಗರ ಪಂಚಮಿಯನ್ನು ಆಚರಿಸಿದ್ರು.
ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಾಗರಪಂಚಮಿಯಂದು ಹುತ್ತಕ್ಕೆ ಇಲ್ಲವೇ ದೇವರ ಮೂರ್ತಿಗಳಿಗೆ ಹಾಲು ಎರೆದು ವ್ಯರ್ಥಮಾಡಲಾಗುತ್ತಿದೆ. ಹಾಲು ಅನಾವಶ್ಯಕವಾಗಿ ಚರಂಡಿ ಸೇರುತ್ತದೆ. ನಾವು ಭಕ್ತರ ನಂಬಿಕೆಗಳನ್ನು ವಿರೋಧಿಸುತ್ತಿಲ್ಲ. ಆದರೆ, ಸ್ವಲ್ಪ ಹಾಲು ಹಾಕಿ ಉಳಿದದ್ದನ್ನು ಹಸಿದವರಿಗೆ ನೀಡಲಿ. ಯಾವ ಹಾವು ಕೂಡ ಹಾಲು ಕುಡಿದು ಬದುಕುವುದಿಲ್ಲ. ಅದರ ಆಹಾರವೇ ಬೇರೆ. ಎಷ್ಟೋ ಕಡೆ ಹಾಲು ಕುಡಿದ ಹಾವುಗಳು ಸಾವನ್ನಪ್ಪಿದ ದಾಖಲೆಗಳಿದೆ. ಈ ಕಾರಣದಿಂದ ಮಹಾರಾಷ್ಟ್ರ ಸರ್ಕಾರ ಹಾವಿಗೆ ಹಾಲೆರೆಯುವುದನ್ನು ನಿಷೇಧಿಸಿದೆ. ಈ ಕಾರಣದಿಂದ ಮಕ್ಕಳಿಗೆ ಹಾಲು ನೀಡಿ ವಿನೂತನವಾಗಿ ನಾಗರ ಪಂಚಮಿಯನ್ನು ಆಚರಿಸುತ್ತಿದ್ದೇವೆ ಎಂದರು.