ಶಿರಸಿ: ಸಾರಾಯಿ ಕೊಳ್ಳಲು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆತಾಯಿಯನ್ನೇ ಮಗ ಕೊಂದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಕುಡಿತದ ಚಟಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ! - ಪಾಪಿ ಮಗ
ಹಳಿಯಾಳ ಪಟ್ಟಣದ ಚವ್ಹಾಣ ಆಶ್ರಯ ಫ್ಲಾಟ್ನ ನಿವಾಸಿ ಭೀಮವ್ವ ರುಕ್ಮಣ್ಣ ಅಮರಾಪುರಕರ(80) ಕೊಲೆಯಾದ ಮಹಿಳೆ. ಮಗ ಅಣ್ಣಪ್ಪ ಅಮರಾಪುರ ಕೊಲೆಗೈದ ಆರೋಪಿ.
ಕೊಲೆ
ಹಳಿಯಾಳ ಪಟ್ಟಣದ ಚವ್ಹಾಣ ಆಶ್ರಯ ಫ್ಲಾಟ್ನ ನಿವಾಸಿ ಭೀಮವ್ವ ರುಕ್ಮಣ್ಣ ಅಮರಾಪುರಕರ(80) ಕೊಲೆಯಾದ ಮಹಿಳೆ. ಮಗ ಅಣ್ಣಪ್ಪ ಅಮರಾಪುರ ಕೊಲೆಗೈದ ಆರೋಪಿ.
ಮಗ ಅಣ್ಣಪ್ಪ ಕಟ್ಟಡ ಕಾರ್ಮಿಕನಾಗಿದ್ದು, ಕುಡಿತದ ದಾಸನಾಗಿದ್ದ. ಹಣಕ್ಕಾಗಿ ವೃದ್ಧ ತಾಯಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಮನೆ ಹಿಂಬದಿಯಲ್ಲಿರುವ ಬಚ್ಚಲು ಮನೆಯಲ್ಲಿ ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.